ಬೆಂಗಳೂರು : ಇತ್ತೀಚಿಗೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದ ವಿಶೇಷ ಸಂಪುಟ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯ 5 ವರ್ಷಗಳ ಕಾಲ ನಾನೆ ಸಿಎಂ ಆಗಿರುತ್ತೇನೆ ಎಂದು ಹೇಳಿಕೆ ನೀಡಿದರು ಇದೀಗ ರಾಷ್ಟ್ರೀಯ ಮಾಧ್ಯಮದ ಸಂದರ್ಶನ ಒಂದರಲ್ಲಿ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನೇ ಪುನುರುಚ್ಚಾರ ಮಾಡಿದ್ದು, 5 ವರ್ಷಗಳ ಕಾಲ ನಾನೆ ಮುಖ್ಯಮಂತ್ರಿ ಆಗಿರುತ್ತೇನೆ. 2028ರಲ್ಲೂ ನಾನೇ ಪಕ್ಷವನ್ನು ಮುನ್ನಡೆಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಹೌದು ರಾಷ್ಟ್ರೀಯ ಮಾಧ್ಯಮದ ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದು, ಕೆಲವು ಶಾಸಕರು ಡಿಕೆ ಶಿವಕುಮಾರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಹೆಚ್ಚಿನ ಶಾಸಕರೇನೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬೆಂಬಲಿಸಿಲ್ಲ. ಅಧಿಕಾರ ಹಂಚಿಕೆಯ ಬಗ್ಗೆ ಯಾವ ಚರ್ಚೆಯು ಕೂಡ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆಯೋ ನಾನು ಅದಕ್ಕೆ ಬದ್ಧನಾಗಿದ್ದೇನೆ. ನಾನಾಗಲಿ ಡಿಸಿಎಂ ಡಿಕೆ ಶಿವಕುಮಾರ್ ಆಗಲಿ ಹೈಕಮಾಂಡ್ ಹೇಳುವುದನ್ನು ಪಾಲನೆ ಮಾಡಲೇಬೇಕು.
ಡಿಕೆ ಶಿವಕುಮಾರ್ ಕೂಡ ಸಿಎಂ ಬದಲಾಗಲಿ ಅಂತ ಹೇಳಿಕೆ ಕೊಟ್ಟೆ ಇಲ್ಲ 2028ರಲ್ಲೂ ನಾನೇ ಪಕ್ಷವನ್ನು ಮುನ್ನಡೆಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಏನೋ ಡಿಸಿಎಂ ಡಿ ಕೆ ಶಿವಕುಮಾರ್ ಸಿಎಂ ಆಕಾಂಕ್ಷಿ ಆಗಿರುವುದು ತಪ್ಪೇನಿಲ್ಲ. ಅವರು ಸಹ ಸದ್ಯ ಸಿಎಂ ಕುರ್ಚಿ ಕಾಲಿ ಇಲ್ಲ ಅಂತ ಹೇಳಿಕೆ ನೀಡಿದ್ದು ಹಾಗಾಗಿ ಅವರು ಕೂಡ ಸಿಎಂ ಆಕಾಂಕ್ಷಿ ಆಗಿರುವುದರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದ್ದಾರೆ.