ಬೆಂಗಳೂರು : ಬೆಂಗಳೂರಿನಲ್ಲಿ ಕೋಟ್ಯಾಂತರ ಮೌಲ್ಯದ ಹೈಡ್ರೋ ಗಾಂಜಾವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಚೇರಿಗೆ ಪಾರ್ಸೆಲ್ ನಲ್ಲಿ ಗಾಂಜಾ ಬಂದಿತ್ತು. 3 ಕೋಟಿ ಮೌಲ್ಯದ 3 ಕೆಜಿ 312 ಗ್ರಾಂ ಮೌಲ್ಯದ ಹೈಡ್ರೋಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ.
ಸ್ನಾಕ್ಸ್ ಬಾಕ್ಸ್ ನಲ್ಲಿ ಅಪಾರ ಪ್ರಮಾಣ ಮೌಲ್ಯದ ಹೈಡ್ರೋಗಾಂಜಾ ಪಾರ್ಸೆಲ್ ಮೂಲಕ ಅಂಚೆ ಕಚೇರಿಗೆ ಬಂದಿತ್ತು. ಅನುಮಾನ ಬಂದು ಅಂಚೆ ಕಚೇರಿ ಸಿಬ್ಬಂದಿಗಳು ಸಿಸಿಬಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ 3 ಕೋಟಿಗೂ ಅಧಿಕ ಮಾಡಿದ ಗಾಂಜಾ ವಶಕ್ಕೆ ಪಡೆದಿದ್ದಾರೆ .








