ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಆರಂಭಿಕ ಟ್ರೆಂಡ್ಗಳಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಭಾರಿ ಮುನ್ನಡೆ ಕಾಯ್ದುಕೊಂಡಿದೆ. ರಾಜ್ಯದ ಒಟ್ಟು 234 ಕ್ಷೇತ್ರಗಳ ಪೈಕಿ ವಿಜಯ್ ಅವರ ಪಕ್ಷವು ಸದ್ಯ 107 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ.
ವಿಜಯ್ ನಿವಾಸದಲ್ಲಿ ಸೀಟಿ ಹೊಡೆದು ಸಂಭ್ರಮಾಚರಣೆ
ಚುನಾವಣಾ ಫಲಿತಾಂಶದ ಟ್ರೆಂಡ್ ತಮ್ಮ ಪರವಾಗಿ ಬರುತ್ತಿದ್ದಂತೆಯೇ ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸದ ಮುಂದೆ ಅಭಿಮಾನಿಗಳ ಸಾಗರವೇ ನೆರೆದಿದೆ. ಇತ್ತ ಮನೆಯ ಒಳಗಡೆ ವಿಜಯ್ ಅವರ ಕುಟುಂಬ ಸದಸ್ಯರು ಸೀಟಿ ಹೊಡೆಯುವ ಮೂಲಕ ಮತ್ತು ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸುತ್ತಿದ್ದಾರೆ. ‘ದಳಪತಿ’ ವಿಜಯ್ ಅವರ ತಾಯಿ ಶೋಭಾ ಮತ್ತು ತಂದೆ ಎಸ್.ಎ. ಚಂದ್ರಶೇಖರ್ ಅವರ ಮುಖದಲ್ಲಿ ಮಗನ ರಾಜಕೀಯ ಯಶಸ್ಸಿನ ಖುಷಿ ಎದ್ದು ಕಾಣುತ್ತಿದೆ.
234 ಕ್ಷೇತ್ರಗಳ ಪೈಕಿ 107 ಕ್ಷೇತ್ರಗಳಲ್ಲಿ ವಿಜಯ್ ಪಕ್ಷ ಮುನ್ನಡೆ. ದಶಕಗಳಿಂದ ತಮಿಳುನಾಡನ್ನಾಳಿದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳಿಗೆ ತೀವ್ರ ಪೈಪೋಟಿ ನೀಡಿರುವ ವಿಜಯ್, ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ಸೂಚನೆ ನೀಡಿದ್ದಾರೆ.
ಅಭಿಮಾನಿಗಳ ಹಬ್ಬ: ರಾಜ್ಯಾದ್ಯಂತ ಟಿವಿ ಕೆ ಕಾರ್ಯಕರ್ತರು ‘ವಿಜಯ್ ಅಣ್ಣಾ’ ಪರ ಘೋಷಣೆಗಳನ್ನು ಕೂಗುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಸದ್ಯದ ಟ್ರೆಂಡ್ ನೋಡಿದರೆ ತಮಿಳುನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ಪೂರ್ಣ ಪ್ರಮಾಣದ ಫಲಿತಾಂಶಕ್ಕಾಗಿ ಇಡೀ ದೇಶ ಕುತೂಹಲದಿಂದ ಕಾಯುತ್ತಿದೆ.
#WATCH | Tamil Nadu Elections 2026 | Family of TVK chief and actor Vijay blow whistles and celebrate at their residence, as the party continues its lead in the state. It is currently leading on 104 of the total 234 seats in the state.
(Video Source: TVK PRO) pic.twitter.com/Ya9iT2MFNH
— ANI (@ANI) May 4, 2026








