ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಸ್ವಿಮಿಂಗ್ ಪೂಲ್ ಸ್ವಚ್ಛಗೊಳಿಸುವ ವೇಳೆ ವಿದ್ಯುತ್ ಶಾಕ್ ನಿಂದ ಈಜು ಕೊಳದ ಕೋಚ್ ದಾರುಣವಾಗಿ ಸಾವಣಪ್ಪಿರುವ ಘಟನೆ ಹುಬ್ಬಳ್ಳಿಯ ಕೇಶವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಸ್ವಿಮ್ಮಿಂಗ್ ಪೂಲ್ ಕೋಚ್ ಶಿವಪುತ್ರಪ್ಪ ದಾನಿಗಲ್ (32) ದುರ್ಮರಣ ಹೊಂದಿದ್ದಾರೆ. ಶಿವಪುತ್ರಪ್ಪ ಆಕ್ಸ್ಫರ್ಡ್ ಕಾಲೇಜು ಬಳಿಯ ಅಮನ್ ಅಪಾರ್ಟ್ಮೆಂಟ್ ನಿವಾಸಿ ಎಂದು ಹೇಳಲಾಗುತ್ತಿದ್ದು, ಆಸಿಡ್ ಹಾಕಿ ವಿದ್ಯುತ್ ಚಾಲಿತ ಗನ್ ನಿಂದ ಸ್ವಚ್ಛ ಮಾಡುವಾಗ ಈ ದುರಂತ ಸಂಭವಿಸಿದೆ.
ಈ ವೇಳೆ ವಿದ್ಯುತ್ ತಗುಲಿ ಕೋಚ್ ಶಿವಪುತ್ರಪ್ಪ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.ಶಿವಪುತ್ರನನ್ನು ಮೇಲುತ್ತಲು ಮುಂದಾದವನಿಗೂ ಕೂಡ ಈ ವೇಳೆ ವಿದ್ಯುತ್ ಶಾಕ್ ತಗುಲಿದೆ. ಶಿವಪುತ್ರಪ್ಪ ದಾನಿಗಲ್ ಸಾವಿನ ಕೊನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಬ್ಬಳ್ಳಿಯ ಕೇಶವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.