ಬೆಂಗಳೂರು : ಬೆಂಗಳೂರಿನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕತ್ತು ಕೊಯ್ದುಕೊಂಡು ಯುವಕ ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿನ್ನೆಯಷ್ಟೇ ರಿಯ್ಯಾಬ್ ಸೆಂಟರ್ ನಿಂದ ಬಂದಿದ್ದ ಯುವಕ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಈ ಒಂದು ಘಟನೆ ಬೆಂಗಳೂರಿನ ಅಶೋಕ್ ನಗರದಲ್ಲಿ ನಡೆದಿದೆ.
ನಿನ್ನ ಬೆಳಿಗ್ಗೆ ಗೌತಮ್ (28) ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿನ್ನೆ ತಾನೇ ರಿಯ್ಯಾಬ್ ಸೆಂಟರ್ ನಿಂದ ಗೌತಮ್ ಬಂದಿದ್ದ. ಮೇಲ್ ನೋಟಕ್ಕೆ ಕೊಲೆ ಆಗಿರಬಹುದು ಎಂದು ಅನುಮಾನ ಇತ್ತು. ಆದರೆ ಯುವಕ ಗೌತಮ್ ಆತ್ಮಹತ್ಯೆ ಮಾಡಿಕೊಂಡಿರುವುದು ಇದೀಗ ಪತ್ತೆಯಾಗಿದೆ. ಸದ್ಯ ಅಶೋಕನಗರ ಠಾಣೆ ಪೊಲೀಸರು ಯುಡಿಆರ್ ದಾಖಲೆಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







