ಮೈಸೂರು : ಐಷಾರಾಮಿ ಶೋಕಿಗಾಗಿ ದೊಡ್ಡ ದೊಡ್ಡ ವ್ಯಕ್ತಿಗಳು ಅನಿಸಿಕೊಂಡವರು ಅಮಾಯಕರ ಜೀವನದಲ್ಲಿ ಆಟ ಆಡುತ್ತಾರೆ. ಇದೀಗ ಮೈಸೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದಂತಹ ಹಯಾಬುಸಾ ಬೈಕ್ ಝೋಮ್ಯಾಟೋ ಡೆಲಿವರಿ ಬಾಯ್ ಬೈಕ್ ಗೆ ಗುದ್ದಿದ ಪರಿಣಾಮ ಡೆಲಿವರಿ ಬಾಯ್ ಹಾಗು ಹಯಾಬೂಸಾ ಬೈಕ್ ಸವಾರ ಇಬ್ಬರು ಸ್ಥಳದಲ್ಲಿ ಉಸಿರು ಚೆಲ್ಲಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೌದು ಮೈಸೂರಿನ ಬನ್ನಿಮಂಟಪದ ಬಳಿ ಜುಲೈ 6 ರಂದು ಮಧ್ಯರಾತ್ರಿ ಒಂದು ಘಟನೆ ನಡೆದಿದ್ದು, ದುಬಾರಿ ಬೆಲೆಯ ಹಯಾಬುಸ ಬೈಕ್ ಭೀಕರ ಅಪಘಾತ ಸಂಭವಿಸಿದ್ದು, ಝೋಮ್ಯಾಟೋ ಸವಾರನಿಗೆ ಹಯಾಬುಸ ಬೈಕ್ ಅಪ್ಪಳಿಸಿದ ಪರಿಣಾಮ ಝಮಾಟೋ ಬಾಯ್ ಕಾರ್ತಿಕ್ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇನ್ನೂ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಮೈಸೂರಿನಲ್ಲಿ ರಾಕೆಟ್ ವೇಗದಲ್ಲಿ ಬಂದು ಝೋಮ್ಯಾಟೋ ಬೈಕ್ ಗೆ ಹಯಾಬುಸ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಡೆಲಿವರಿ ಬಾಯ್ ಕಾರ್ತಿಕ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಸುಮಾರು 100 ಮೀಟರ್ ದೂರದಲ್ಲಿ ಪೆಟ್ರೋಲ್ ಸೊರಿ ಹಯಾಬೂಸಾ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಹಯಾಬೂಸಾ ಬೈಕ್ ಸವಾರ ಸೈಯ್ಯದ್ ಸರೂನ್ ಗು ಗಂಭೀರವಾದ ಗಾಯಗಳಾಗಿತ್ತು. ಆದರೆ ಆತ ಕೂಡ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾನೆ.