ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರವಾದ ಕೊಲೆಯಾಗಿದ್ದು, ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಎಣ್ಣೆ ಪಾರ್ಟಿಯ ವೇಳೆ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಶಿವಮೊಗ್ಗದ ಹೊರವಲಯದ ಬೊಮ್ಮನಕಟ್ಟಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಗಲಾಟೆಯ ವೇಳೆ ಮಚ್ಚಿನಿಂದ ಹಳೆ ನಡೆಸಿ ಪವನ್ (28) ಕೊಲೆ ಮಾಡಲಾಗಿದೆ.
ಶಿವಮೊಗ್ಗದ ಹೊರವಲಯದ ಬೊಮ್ಮನಕಟ್ಟೆಯಲ್ಲಿ ತಡರಾತ್ರಿ ಸ್ನೇಹಿತರು ಪಾರ್ಟಿ ಮಾಡಿದ್ದರು. ಗಲಾಟೆ ವೇಳೆ ಮಚ್ಚಿನಿಂದ ಹಲ್ಲೆ ನಡೆಸಿ ಪವನ್ (28) ಎನ್ನುವ ಯುವಕನನ್ನು ಕೊಲೆ ಮಾಡಲಾಗಿದೆ. ಸ್ನೇಹಿತ ಪವನ್ ಅನ್ನು ಶಿವಕುಮಾರ್ ಎನ್ನುವ ಆರೋಪಿ ಕೊಲೆ ಮಾಡಿದ್ದಾನೆ.
ಶಿವಕುಮಾರ್ ಮನೆಗೆ ರಾತ್ರಿ ಪವನ್ ಎಣ್ಣೆ ಪಾರ್ಟಿಗೆ ಎಂದು ತೆರಳಿದ್ದ. ಎಣ್ಣೆ ಪಾರ್ಟಿಯ ವೇಳೇ ಇಬ್ಬರು ನಡುವೆ ಗಲಾಟೆ ನಡೆದಿದೆ. ಸದ್ಯ ಸ್ಥಳಕ್ಕೆ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ. ಸದ್ಯ ಆರೋಪಿ ಶಿವಕುಮಾರ ವಶಕ್ಕೆ ಪಡೆದುಕೊಂಡಿದ್ದು, ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.