ಕೊಡಗು : ಹೋಂ ಸ್ಟೇ ನಲ್ಲಿ ತಂಗಿದ್ದ ಬೆಂಗಳೂರು ಮೂಲದ ಮಹಿಳೆಗೆ ಹೋಂಸ್ಟೇ ನಿರ್ವಾಹಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಈ ಒಂದು ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯ ಈಶ್ವರ ನಿವಾಸ ಹೋಂಕೆನಲ್ಲಿ ನಡೆದಿದೆ.
ಹೌದು ಹೋಂ ಸ್ಟೇ ನಿರ್ವಾಹಕ ಪ್ರವೀಣ್ ನಿಂದ ಮಹಿಳೆಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಮುಂಜಾನೆ 3 ಗಂಟೆಗೆ ಕುಡಿದು ಬಂದು ಪ್ರವೀಣ್ ಕಿರುಕುಳ ನೀಡಿದ್ದಾನೆ. ಕೊಡಗು ಜಿಲ್ಲೆಯ ಮಡಿಕೇರಿಯ ಈಶ್ವರ ನಿಲಯ ಹೋಂ ಸ್ಟೇನಲ್ಲಿ ಮಹಿಳೆಯ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಬಾಗಿಲು ತೆಗೆಯದಿದ್ದಕ್ಕೆ ಕಾರಿನ ಮಾಡಿದ ಪ್ರವೀಣ್, ಬೆಂಗಳೂರು ಮೂಲದ ಪ್ರವಾಸಿ ಮಮತಾ ಗೆ ಪ್ರವೀಣ್ ಕಿರುಕುಳ ನೀಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಈಗ ಮಹಿಳೆ ಮಮತಾ ಈ ಕುರಿತು ದೂರು ನೀಡಿದ್ದಾರೆ.