ಬೆಂಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶಾಸಕ ಎಚ್ ಡಿ ರೇವಣ್ಣ ಅವರ ಅರ್ಜಿ ವಿಚಾರಣೆ ನಡೆಯುತ್ತಿದ್ದು ಇದೀಗ ವಿಚಾರಣೆಯನ್ನು ಕೋರ್ಟ್ 2.45ಕ್ಕೆ ಮುಂದೂಡಿದೆ.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಧ್ಯಾಹ್ನ 2:45 ಕ್ಕೆ ವಿಚಾರಣೆಯನ್ನು ಮುಂದೂಡಿತು.
ಕಳೆದ ಎರಡು ಗಂಟೆಯಿಂದ ಎಚ್‌ಡಿ ರೇವಣ್ಣ ಅವರ ಜಾಮಿನ್ ಅರ್ಜಿ ವಿಚಾರಣೆ ನಡೆಯುತ್ತಿದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಮತ್ತು ಪ್ರತಿವಾದ ನಡೆಯುತ್ತಿದೆ. ಶಾಸಕ ಎಚ್ ಡಿ ರೇವಣ್ಣ ಪರ ಸಿ ಎಸ್ ನಾಗೇಶ್ ಅವರು ವಾದ ಮಾಡುತ್ತಿದ್ದಾರೆ. ಎಸ್ ಐ ಟಿ ಪರ ಎಸ್ಪಿಪಿ ಜಾಯ್ನ ಕೊಥರಿ ಅವರು ವಾದ ಮಾಡುತ್ತಿದ್ದಾರೆ.