ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನಟ ದರ್ಶನ್ ಹಾಗೂ ಡಿ ಗ್ಯಾಂಗ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದ್ದು, ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಸ್ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.
ವಿಚಾರಣೆಯ ವೇಳೆ ಪೊಲೀಸರ ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದು, ಅಕ್ಟೋಬರ್ 30ರ ತಮ್ಮ ಆದೇಶದ ಬಗ್ಗೆ ಎರಡು ನಿಮಿಷ ವಾದಿಸುತ್ತೇನೆ ಎಂದು ಹೇಳಿ, ತಕ್ಷಣ ಸರ್ಜರಿ ಆಗದಿದ್ದರೆ ಲಕ್ವ ಹೊಡೆಯುತ್ತದೆ ಎಂದು ವಾದಿಸಿದ್ದರು. ಮೊದಲ ಮೆಡಿಕಲ್ ರಿಪೋರ್ಟ್ ಅನ್ನು ನಾನು ಓದಬಯಸುತ್ತೇನೆ. ಒಂದು ವಾರದ ಬಳಿಕ ವೈದ್ಯರ ವರದಿ ಸಲ್ಲಿಸಿದ್ದರು. ನವೆಂಬರ್ 6 ಮತ್ತು 11ರಂದು 2 ವರದಿ ಸಲ್ಲಿಸಿದ್ದಾರೆ. ದರ್ಶನ್ ಅವರನ್ನು ಸರ್ಜರಿಗೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಹೇಳಿದ್ದರು.
ಮೊದಲ ವರಿದಿಯಲ್ಲಿ ಹೀಗೆ ಎಂದು ವೈದ್ಯರು ಹೇಳಿದ್ದರು. ಅದಾದ 15 ದಿನದ ಬಳಿಕವೂ ದರ್ಶನ್ ಅವರನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಬಿಪಿಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಎರಡನೇ ವರದಿ ನೀಡಿದ್ದಾರೆ. ನವೆಂಬರ್ 1ರಿಂದ ಬಿಪಿ ಮೋನಿಟರ್ ಚಾರ್ಟ್ ನೀಡಿದ್ದಾರೆ.ಬಿಪಿಎಲ್ ವ್ಯತ್ಯಾಸ ಆಗುತ್ತಿದೆ ಎಂದು ಎರಡನೇ ವರದಿ ನೀಡಿದ್ದಾರೆ. ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟಲ್ಲಿ ಪ್ರಶ್ನಿಸಿದ್ದಾರೆ ಎಂದಾಗ ಸರ್ಜರಿಯ ಬಗ್ಗೆ ಕೋರ್ಟಿಗೆ ತಿಳಿಸುತ್ತೇವೆ ಎಂದು ಸಿ ವಿ ನಾಗೇಶ್ ತಿಳಿಸಿದರು.
ಐದನೇ ವಾರ ಆದರೂ ಕೂಡ ಸಿದ್ಧಪಡಿಸಲಾಗುತಿದೆ. ಅಂತಾನೆ ಹೇಳಿದ್ದಾರೆ ದರ್ಶನ್ ಅವರನ್ನು ಸರ್ಜರಿಗೆ ಸಿದ್ಧಪಡಿಸುತ್ತಿದ್ದಾರೆ. ಅಂತಾನೇ ಹೇಳಿದ್ದಾರೆ.ಸಿನಿಮಾ ಗೀತೆಯಂತೆ ಇವರು ವರದಿ ಸಲ್ಲಿಸುತ್ತಿದ್ದಾರೆ. ಹೌದು ಫಿಸಿಯೋಥೆರಪಿ ಮಾತ್ರ ಮಾಡಿಸುತ್ತಿದ್ದಾರೆ ಹೀಗಾಗಿ ಅದನ್ನು ಜೈಲಿನಲ್ಲಿ ಮುಂದೆವರಿಸಬಹುದಲ್ವಾ? ಕೋರ್ಟ್ ದಾರಿ ತಪ್ಪಿಸಿದ್ದಾರೆ. ನಾಳೆ ಲಕ್ವಾ ಹೊಡೆಯುತ್ತೆ ಅಂತ ಹೇಳಿ ಬೇಲ್ ತೆಗೆದುಕೊಂಡಿದ್ದಾರೆ. 2 ರೂಪಾಯಿ 25 ಪೈಸೆಯ ಮಾತ್ರೆ ನೀಡಿದರೆ ಬಿಪಿ ಕಂಟ್ರೋಲ್ ಗೆ ಬರುತ್ತದೆ ಎಂದು ನಾನು ಸಂಪರ್ಕಿಸಿದ ವೈದ್ಯರು ಹೇಳಿದ್ದಾರೆ.
ರೇಣುಕಾ ಸ್ವಾಮಿ ಇನ್ಸ್ಟಾಗ್ರಾಮ್ ಅಕೌಂಟಿಗೆ ಮೆಸೇಜ್ ಕಳುಹಿಸಿದ್ದ ಆ ಆಪ್ ನಲ್ಲಿ ಮೆಸೇಜ್ ಬ್ಲಾಕ್ ಮಾಡಲು ಅವಕಾಶವಿದೆ. ಡ್ರಾಪ್ ಮಿ ಯುವರ್ ನಂಬರ್ ಎಂದು ಪವಿತ್ರ ಗೌಡ ಮೆಸೇಜ್ ರೇಣುಕಾ ಸ್ವಾಮಿಗೆ ಕಳುಹಿಸಿದ್ದಾಳೆ. ಅಶ್ಲೀಲ ಮೆಸೇಜ್ ಕಳುಹಿಸಿದಾಗ ಅದನ್ನು ಅಲ್ಲಿಯೇ ಬ್ಲಾಕ್ ಮಾಡಲು ಅವಕಾಶವಿದೆ ಎಂದು ಎಸ್ ಪಿ ಪಿ ಪ್ರಸನ್ನಕುಮಾರ್ ವಾದಿಸಿದರು.
ಫೆಬ್ರುವರಿಯಲ್ಲಿ ರೇಣುಕಾ ಸ್ವಾಮಿ ಮೆಸೇಜ್ ಕಳುಹಿಸಿದರು ಇವರು ಬ್ಲಾಕ್ ಮಾಡಿಲ್ಲ. ನಂತರ ಪವನ್ ಮೊಬೈಲ್ ನಿಂದ ಮೆಸೇಜ್ ಶುರುವಾಗುತ್ತದೆ.ತನ್ನ ನಂಬರ್ ಎಂದು ಪವಿತ್ರ ಗೌಡ ಪವನ್ ನಂಬರ್ ನೀಡುತ್ತಾನೆ. ಪವನ್ ರೇಣುಕಾ ಸ್ವಾಮಿ ಮನೆ ವಿಳಾಸ ಕೇಳುತ್ತಾನೆ. ಜೂನ್ 6 ರಂದು ಮೊಬೈಲ್ ನಲ್ಲಿ ವಾಟ್ಸ್ ಅಪ್ ಮೆಸೇಜ್ ಆರಂಭ ಆಗಿರುತ್ತದೆ. ಜೂನ್ 7 ರಂದು ರಂದು ಚಿತ್ರದುರ್ಗ ಕೋರ್ಟ್ ಬಳಿ ಇರುತ್ತೇನೆಂದು ಹೇಳುತ್ತಾನೆ. ಆರೋಪಿ 4, 5 ಮತ್ತು 6 ಆರೋಪಿಗಳನ್ನು A3 ಪವನ್ ಅಲ್ಲಿಗೆ ಕಳುಹಿಸುತ್ತಾನೆ. ಕೋರ್ಟ್ ಬಳಿ ರೇಣುಕಾ ಸ್ವಾಮಿ ಹುಡುಕಲು ಕಳುಹಿಸುತ್ತಾನೆ.
ಆರೋಪಿಗಳು ಕೋಟ್ ಬಳಿ ಹೋಗಿದ್ದಾರೆ ಎಂಬುದಕ್ಕೆ ತಾಂತ್ರಿಕ ಸಾಕ್ಷಿಗಳಿದ್ದು, ಮೊಬೈಲ್ ಫೋನಿನ ಲಾಗಿಂಟ್ಯುಡ್ ಲಾಟಿಟ್ಯೂಡ್ ವಿವರವಿದೆ. ಮರುದಿನ ಆಟೋದಲ್ಲಿ ಫಾಲೋ ಮಾಡಿ ರೇಣುಕಾ ಫೋಟೋ ಕಳುಹಿಸುತ್ತಾರೆ A3 ಪವನ್ಗೂ ಸಹ ಈ ಮೂವರು ಆರೋಪಿಗಳು ಫೋಟೋ ಕಳಿಸುತ್ತಾರೆ ಇದಕ್ಕೆ ಪೂರಕವಾಗಿ ಸಿಸಿಟಿವಿ ದೃಶ್ಯವಿದೆ. ಅಕ್ಕ ಪಕ್ಕ ಇಬ್ಬರು ಆರೋಪಿಗಳು ಕೂರುತ್ತಾರೆ. ಪೆಟ್ರೋಲ್ ಬಂಕ್ ಬಳಿ ಇಟಿಯೋಸ್ ಕಾರಿನಲ್ಲಿ ಶಿಫ್ಟ್ ಮಾಡುತ್ತಾರೆ.
ಈ ವೇಳೆ ದರ್ಶನ್ ಫ್ರೆಂಡ್ ಗೆ ಮೆಸೇಜ್ ಕಳುಹಿಸಿದ್ದೀಯಾ ಅಂತ ಕೇಳುತ್ತಾರೆ. ಬಾಸ್ ನಿನ್ನನ್ನು ಕರೆಯುತ್ತಿದ್ದಾರೆ ಎಂದು ಆತನನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಬಂದು ಸಾರಿ ಹೇಳು. ಸಾರಿ ಕೇಳಿದರೆ ವಾಪಸ್ ಕರೆತರುತ್ತೇವೆ ಎಂದು ವಂಚಿಸಿದರು. ಹೀಗೆ ವಂಚಿಸಿ ರೇಣುಕಾ ಸ್ವಾಮಿಯನ್ನು ಅಪಹರಿಸಿದ್ದಾರೆ.ರೇಣುಕಾ ಸ್ವಾಮಿಯ ಬಟ್ಟೆಯನ್ನು ಬಿಚ್ಚಿದ್ದರು. ಆತ ಕೈ ಮುಗಿಯುವ ಫೋಟೋ ಕೂಡ ಸಿಕ್ಕಿದೆ. ವಾಹನಗಳು ಬರುತ್ತಿರುವ ಬಗ್ಗೆ ಸಾಕ್ಷಿಗಳು ಹೇಳಿಕೆ ನೀಡಿದ್ದಾರೆ. ಆರು ಜನ ಸಾಕ್ಷಿಗಳಿದ್ದಾರೆ. ಇವರು ಉದ್ಯೋಗಿಗಳೆಂಬುವುದಕ್ಕೆ ವಿವಾದವಿಲ್ಲ.
ವಿಚಾರಣೆಯ ಆರಂಭದಲ್ಲಿ A13 ಆರೋಪಿ ಪ್ರದೋಷ್ ಪರ ಹಿರಿಯ ವಕೀಲ ದಿವಾಕರ್ ಅವರು ವಾದ ಮಂಡಿಸಿದ್ದು, ದರ್ಶನ್ ಅವರಿಂದ ಮೂವತ್ತು ಲಕ್ಷ ರೂಪಾಯಿ ಪಡೆದು ಸಾಕ್ಷಿಯ ನಾಶಕ್ಕೆ ಯತ್ನಿಸಿರುವ ಆರೋಪ ಇದೆ. 30 ಲಕ್ಷ ಹಣವನ್ನು ಕೂಡ ಪೊಲೀಸರು ಇಸ್ ಮಾಡಿದ್ದಾರೆ. ಹೀಗಾಗಿ ಒಂದು ರೂಪಾಯಿ ಕೂಡ ಸಾಕ್ಷ ನಾಶಕ್ಕೆ ಬಳಸಿಲ್ಲ. ಘಟನೆಯ ಬಗ್ಗೆ ಪ್ರದೋಷ್ ಪಾತ್ರ ಕೇವಲ ಮಾಹಿತಿದಾರನದ್ದು ಹಲ್ಲೆ ನಡೆಸಿರುವುದಾಗಿ ಪೊಲೀಸರು ಆರೋಪಿಸಿದರು ಕೂಡ ಅದಕ್ಕೆ ಸಾಕ್ಷಿ ಇಲ್ಲ ಎಂದು ಪ್ರದೋಷ್ ಪರ ಹಿರಿಯ ವಕೀಲ ಕೆ ದಿವಾಕರ್ ವಾದಿಸಿದರು.
ಮೂರು ದಿನಗಳ ನಂತರ ಹಣ ಮತ್ತೆ ಬಟ್ಟೆಯನ್ನು ರಿಕವರಿ ಮಾಡಿದ್ದಾರೆ. ಬಟ್ಟೆಯಲ್ಲಿ ಡಿಎನ್ಎ ಪತ್ತೆಯಾಗಿದೆ ಎಂದು ಜಾಮೀನು ತಿರಸ್ಕರಿಸಿದ್ದಾರೆ. ಸೆರೆಂಡರ್ ಆದವರಿಗೆ 1 ರೂಪಾಯಿ ಹಣವನ್ನು ಕೂಡ ಹಂಚಿಲ್ಲ. ಜಾಮೀನು ಸಿಕ್ಕ ಆರೋಪಿ 13ಕ್ಕೆ ಸಮಾನಾಂತರವಾಗಿ ಆರೋಪವಿದೆ ಎಂದು ಆರೋಪಿ ಪ್ರದೋಷ್ ಪರ ಹಿರಿಯ ವಕೀಲ ಕೆ.ದಿವಾಕರ್ ವಾದ ಮಂಡಿಸಿದರು.