Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rain Alert : ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್!

​ರೋಮ್‌ನಲ್ಲಿ ಪ್ರಧಾನಿ ಮೋದಿ ಎದುರು ಭಾರತೀಯ ಶಾಸ್ತ್ರೀಯ ಕಲಾ ವೈಭವ! ಅನಿವಾಸಿ ಭಾರತೀಯರ ಪ್ರೀತಿಗೆ ಪಿಎಂ ಫಿದಾ!

Arsenal Champions: ಬರೋಬ್ಬರಿ ವರ್ಷಗಳ ಕಾಯುವಿಕೆಗೆ ಸಿಕ್ಕಿತು ಬಿಗ್ ರಿವಾರ್ಡ್; ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್ಸೆನಲ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸಿದ್ದರಾಮಯ್ಯ ಸಂಪುಟಕ್ಕೆ ‘ಹಿರಿಯ’ರ ಲಗ್ಗೆ: ‘ಮಂತ್ರಿಗಿರಿ’ಗಾಗಿ 40ಕ್ಕೂ ಹೆಚ್ಚು ‘ಶಾಸಕ’ರಿಂದ ಸಿಎಂಗೆ ಒತ್ತಾಯ!
KARNATAKA

BIG NEWS: ಸಿದ್ದರಾಮಯ್ಯ ಸಂಪುಟಕ್ಕೆ ‘ಹಿರಿಯ’ರ ಲಗ್ಗೆ: ‘ಮಂತ್ರಿಗಿರಿ’ಗಾಗಿ 40ಕ್ಕೂ ಹೆಚ್ಚು ‘ಶಾಸಕ’ರಿಂದ ಸಿಎಂಗೆ ಒತ್ತಾಯ!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಂತ್ರಿ ಮಂಡಲ ಪುನರ್ ರಚನೆಯ ಕೂಗು ಮತ್ತೊಮ್ಮೆ ಜೋರಾಗಿದ್ದು, ಹಿರಿಯ ಶಾಸಕರು ಒಗ್ಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾದ ಹಿರಿಯ ಶಾಸಕರ ತಂಡವು, ತಮಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಬಲವಾಗಿ ಆಗ್ರಹಿಸಿದೆ.

ಹಿರಿಯ ಶಾಸಕರ ಪ್ರಮುಖ ಬೇಡಿಕೆಗಳು:

  • ಮೂರು ಬಾರಿ ಗೆದ್ದವರಿಗೆ ಆದ್ಯತೆ: ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಮಗೆ ಅನುಭವವಿದೆ. ಹೀಗಾಗಿ ಮಂತ್ರಿ ಮಂಡಲ ಪುನರ್ ರಚನೆ ವೇಳೆ ಹಿರಿಯರಿಗೆ ಮೊದಲ ಆದ್ಯತೆ ನೀಡಬೇಕು.

  • ಸಂಖ್ಯೆಯ ಬಲ: ಸುಮಾರು 40ಕ್ಕೂ ಹೆಚ್ಚು ಹಿರಿಯ ಶಾಸಕರು ಈ ಬೇಡಿಕೆಯನ್ನು ಇಟ್ಟಿದ್ದು, ಕನಿಷ್ಠ 20 ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಅವರ ಪ್ರಮುಖ ಮನವಿಯಾಗಿದೆ.

  • ಅವಕಾಶದ ನಿರೀಕ್ಷೆ: ಈ ಹಿಂದೆ ಅವಕಾಶ ವಂಚಿತರಾದ ಹಿರಿಯ ಮುಖಂಡರು ಸಿದ್ದರಾಮಯ್ಯ ಅವರ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿಕೆ:

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು, “ನಾವೆಲ್ಲರೂ ಮೂರಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಶಾಸಕರಾಗಿದ್ದೇವೆ. ಮಂತ್ರಿ ಮಂಡಲ ಪುನರ್ ರಚನೆ ಮಾಡುವ ಸಂದರ್ಭದಲ್ಲಿ ನಮ್ಮಂತಹ ಹಿರಿಯರನ್ನು ಪರಿಗಣಿಸಬೇಕು ಎಂದು ಕೇಳಿಕೊಂಡಿದ್ದೇವೆ. ಸುಮಾರು 40ಕ್ಕೂ ಹೆಚ್ಚು ಹಿರಿಯ ಶಾಸಕರು ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ,” ಎಂದು ತಿಳಿಸಿದರು.

ರಾಜಕೀಯ ಸಂಚಲನ:

ವಿಧಾನಸೌಧ ಕಚೇರಿಯಲ್ಲಿ ಸಿಎಂ ಸಿದ್ಧರಾಮಯ್ಯ ಭೇಟಿಯಾದಂತ 40ಕ್ಕೂ ಹೆಚ್ಚು ಶಾಸಕರು, ಕನಿಷ್ಠ 20 ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಮನವಿ ಮಾಡಿದರು. ಭೋಜನ ವಿರಾಮದ ಸಮಯದಲ್ಲಿ ಸಿಎಂ ಭೇಟಿಯಾಗಿ ಈ ಮನವಿಯನ್ನು ಮಾಡಿದ್ದಾರೆ.

ಶಾಸಕರಾದಂತ ಎನ್ ಎ ಹ್ಯಾರಿಸ್, ಹಂಪನಗೌಡ ಬಾದರ್ಲಿ, ಹೆಚ್.ಸಿ ಬಾಲಕೃಷ್ಣ, ನಾರಾಯಣಸ್ವಾಮಿ, ಅಶೋಕ್ ಪಟ್ಟಣ, ಯಶವಂತರಾಯಗೌಡ ಪಾಟೀಲ್, ತನ್ವೀರ್ ಸೇಠ್, ರಾಘವೇಂದ್ರ ಹಿಟ್ನಾಳ್ ಸೇರಿದಂತೆ 16 ಶಾಸಕರಿಂದ ಸಿಎಂ ಸಿದ್ಧರಾಮಯ್ಯಗೆ ಮನವಿ ಮಾಡಲಾಗಿದೆ.

ಲೋಕಸಭಾ ಚುನಾವಣೆಗಳ ಬಳಿಕ ಅಥವಾ ಸರ್ಕಾರದ ಮಧ್ಯಂತರ ಅವಧಿಯಲ್ಲಿ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಈ ‘ಸೀನಿಯರ್’ ಶಾಸಕರ ಒಗ್ಗಟ್ಟು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಯವರು ಈ ಮನವಿಗೆ ಹೇಗೆ ಸ್ಪಂದಿಸಲಿದ್ದಾರೆ ಮತ್ತು ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ಬೇಕೆಂದು ಹಿರಿಯ ಶಾಸಕರು ಪಟ್ಟು ಹಿಡಿದಿದ್ದು, ಇದು ಸಿದ್ದರಾಮಯ್ಯ ಅವರಿಗೆ ಹೊಸ ಸವಾಲಾಗಿ ಪರಿಣಮಿಸಿದೆ.

ನಾಳೆಯಿಂದ SSLC ಪರೀಕ್ಷೆ ಆರಂಭ: ಪರೀಕ್ಷಾ ಕೇಂದ್ರಗಳಲ್ಲಿ ಹದ್ದಿನ ಕಣ್ಣು, ಈ ಮಾರ್ಗಸೂಚಿ ಪಾಲನೆ ಕಡ್ಡಾಯ!

SHOCKING : ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್ : ಗೆಳೆಯನ ಮುಂದೆನೆ ಹೋಯ್ತು ಜೀವ | Watch Video

Share. Facebook Twitter LinkedIn WhatsApp Email

Related Posts

Rain Alert : ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್!

2 Mins Read

SHOCKING : ಕೋಲಾರದಲ್ಲಿ ಘೋರ ದುರಂತ : ತಿಥಿ ಕಾರ್ಯಕ್ರಮದಲ್ಲಿ ಊಟ ಮಾಡುವಾಗ, ಕರೆಂಟ್ ಶಾಕ್ ನಿಂದ ಬಾಲಕ ಸಾವು

1 Min Read

BIG NEWS : ಹಣ ವಶಕ್ಕೆ ಪಡೆದಿಲ್ಲ ಎಂಬ ಕಾರಣಕ್ಕೆ ಲಂಚದ ಕೇಸ್ ರದ್ದಾಗದು : ಹೈಕೋ‌ರ್ಟ್ ಮಹತ್ವದ ಆದೇಶ

2 Mins Read
Recent News

Rain Alert : ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್!

​ರೋಮ್‌ನಲ್ಲಿ ಪ್ರಧಾನಿ ಮೋದಿ ಎದುರು ಭಾರತೀಯ ಶಾಸ್ತ್ರೀಯ ಕಲಾ ವೈಭವ! ಅನಿವಾಸಿ ಭಾರತೀಯರ ಪ್ರೀತಿಗೆ ಪಿಎಂ ಫಿದಾ!

Arsenal Champions: ಬರೋಬ್ಬರಿ ವರ್ಷಗಳ ಕಾಯುವಿಕೆಗೆ ಸಿಕ್ಕಿತು ಬಿಗ್ ರಿವಾರ್ಡ್; ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್ಸೆನಲ್!

SHOCKING : ಕೋಲಾರದಲ್ಲಿ ಘೋರ ದುರಂತ : ತಿಥಿ ಕಾರ್ಯಕ್ರಮದಲ್ಲಿ ಊಟ ಮಾಡುವಾಗ, ಕರೆಂಟ್ ಶಾಕ್ ನಿಂದ ಬಾಲಕ ಸಾವು

State News
KARNATAKA

Rain Alert : ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್!

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ (ಪ್ರೀ-ಮಾನ್ಸೂನ್) ಮತ್ತಷ್ಟು ಚುರುಕಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು…

SHOCKING : ಕೋಲಾರದಲ್ಲಿ ಘೋರ ದುರಂತ : ತಿಥಿ ಕಾರ್ಯಕ್ರಮದಲ್ಲಿ ಊಟ ಮಾಡುವಾಗ, ಕರೆಂಟ್ ಶಾಕ್ ನಿಂದ ಬಾಲಕ ಸಾವು

BIG NEWS : ಹಣ ವಶಕ್ಕೆ ಪಡೆದಿಲ್ಲ ಎಂಬ ಕಾರಣಕ್ಕೆ ಲಂಚದ ಕೇಸ್ ರದ್ದಾಗದು : ಹೈಕೋ‌ರ್ಟ್ ಮಹತ್ವದ ಆದೇಶ

BIG NEWS : ಹೈಕೋರ್ಟ್ ಸೂಚನೆ ಬೆನ್ನಲ್ಲೇ ಸೈಲೆಂಟ್ ಆದ ಸಾರಿಗೆ ನೌಕರರು : ಎಂದಿನಂತೆ ಇಂದು ಬಸ್ ಸಂಚಾರ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.