ಬೆಂಗಳೂರು : ನಿನ್ನೆ ತಾನೆ ಪ್ಲಾಸ್ಟಿಕ್ ನಲ್ಲಿ ಇಡ್ಲಿ ತಯಾರಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದೀಗ ಟ್ಯಾಟೂ ಹಾಗೂ ಮಹಿಳೆಯರ ಸೌಂದರ್ಯ ವರ್ಧಕಕ್ಕೆ ಹೆಸರುವಾಸಿಯಾದ ಲಿಪ್ಸ್ಟಿಕ್, ಲಿಪ್ ಕೇರ್ ಹಾಗೂ ಕಾಸ್ಮೆಟಿಕ್ಸ್ ಗಳಿಗೂ ಕೂಡ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಚಿಂತೆ ನಡೆಸಿದ್ದು, ಈ ಕುರಿತು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರಕ್ಕೆ ಕಠಿಣ ಕಾನೂನು ಜಾರಿ ತರಲು ಪತ್ರ ಬರೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್ ಗಳಿಗೂ ಬ್ರೇಕ್ ಬೀಳುವ ಸಾಧ್ಯತೆ ಇದೆ. ಕೇಂದ್ರ ಆರೋಗ್ಯ ಇಲಾಖೆಗೆ ಮನವಿ ಮಾಡಲು ಇದೀಗ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದ್ದು, ಈ ಕುರಿತು ಪತ್ರ ಬರೆಯಲು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡರಾವ್ ಇದೀಗ ಸಿದ್ಧತೆ ನಡೆಸಿದ್ದಾರೆ.ಬೀದಿ ಬದಿಯಲ್ಲಿ ಸಿಗುವಂತಹ ಲಿಪ್ಸ್ಟಿಕ್ ಲಿಪ್ ಕೇರ್ ಕಾಸ್ಮೆಟಿಕ್ಸ್ ಗಳಿಗೂ ರಾಜ್ಯ ಸರ್ಕಾರ ಇದೀಗ ಬ್ರೇಕ್ ಹಾಕಲು ನಿರ್ಧರಿಸಿದೆ. ಅನೇಕ ಕಡೆಗಳಲ್ಲಿ ಬೀದಿಬದಿಯಲ್ಲಿ ಕಾಸ್ಮೆಟಿಕ್ಸ್ ಗಳನ್ನು ಮಾರಾಟ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಾಸ್ಮೆಟಿಕ್ಸ್ ಮಾರಾಟ ತಡೆಗೆ ಕಾನೂನು ತರಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್ ಗೆ ಇದೀಗ ಬ್ರೇಕ್ ಬೀಳುವ ಸಾಧ್ಯತೆ ಇದೆ ಕೇಂದ್ರ ಆರೋಗ್ಯ ಇಲಾಖೆಗೆ ಸಚಿವ ದಿನೇಶ್ ಗುಂಡರಾವ್ ಪತ್ರ ಬರೆಯಲು ಇದೀಗ ಮುಂದಾಗಿದ್ದಾರೆ.ಹಾಗಾಗಿ ಕಾಸ್ಮೆಟಿಕ್ಸ್ ಗು ಇನ್ಮುಂದೆ ಕಠಿಣ ನಿಯಮ ಜಾರಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.