ನವದೆಹಲಿ: ಅಂತರರಾಷ್ಟ್ರೀಯ ಕೊರತೆಯ ಲಾಭವನ್ನ ಭಾರತೀಯ ರೈತರಿಗೆ ವರ್ಗಾಯಿಸಲು ಈರುಳ್ಳಿ ರಫ್ತಿಗೆ ಈ ಹಿಂದೆ ನಿಗದಿಪಡಿಸಿದ್ದ ಕನಿಷ್ಠ ಬೆಲೆ ಮಿತಿಯನ್ನ ಸರ್ಕಾರ ಶುಕ್ರವಾರ ರದ್ದುಗೊಳಿಸಿದೆ.
ಸರ್ಕಾರವು ಈ ಹಿಂದೆ ಪ್ರತಿ ಟನ್’ಗೆ 550 ಡಾಲರ್ ಕನಿಷ್ಠ ರಫ್ತು ಬೆಲೆ (MEP) ನಿಗದಿಪಡಿಸಿತ್ತು, ಇದರರ್ಥ ರೈತರು ತಮ್ಮ ಉತ್ಪನ್ನಗಳನ್ನು ಈ ದರಕ್ಕಿಂತ ಕಡಿಮೆ ಬೆಲೆಗೆ ವಿದೇಶದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ.
ಶುಕ್ರವಾರ ಹೊರಡಿಸಿದ ಡಿಜಿಎಫ್ಟಿ ಅಧಿಸೂಚನೆಯು ಎಂಇಪಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಿದೆ. ಈರುಳ್ಳಿ ಉತ್ಪಾದಿಸುವ ಪ್ರಮುಖ ರಾಜ್ಯವಾದ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಕ್ರಮವು ಸರಕುಗಳ ರಫ್ತನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಈರುಳ್ಳಿ ರಫ್ತಿನ ಮೇಲಿನ ಕನಿಷ್ಠ ರಫ್ತು ಬೆಲೆ (MEP) ಷರತ್ತು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ತೆಗೆದುಹಾಕಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಅಧಿಸೂಚನೆಯಲ್ಲಿ ತಿಳಿಸಿದೆ.
BREAKING : ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ ; ಬಸ್- ಟ್ರಕ್ ನಡುವೆ ಡಿಕ್ಕಿ, 8 ಮಂದಿ ಸಾವು, 33 ಜನರಿಗೆ ಗಾಯ