ಬೆಂಗಳೂರು : ಮದ್ಯದ ಅಂಗಡಿ ಮಾಲೀಕರ ಒತ್ತಡಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದ್ದು, ಲೈಸೆನ್ಸ್ ನವೀಕರಣ ಶುಲ್ಕ ಇದೀಗ ಇಳಿಸಿದೆ.ಅಬಕಾರಿ ಲೈಸೆನ್ ಶುಲ್ಲ ಶೇ. 50 ರಷ್ಟು ಇಳಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ.
ಕಳೆದ ಮೇ 15 ರಂದು ಸರ್ಕಾರವು ಪರವಾನಗಿ ಶುಲ್ಕವನ್ನು ದುಪ್ಪಟ್ಟುಗೊಳಿಸುವ ಕರಡು ಅಧಿಸೂಚನೆ ಹೊರಡಿಸಿತ್ತು. ಮದ್ಯದಅಂಗಡಿ ಲೈಸೆನ್ಸ್ ನವೀಕರಣ ಶುಲ್ಕ ಹೆಚ್ಚಳ ಮಾಡಿದ್ದನ್ನು ಖಂಡಿಸಿ, ಇದರಿಂದ ಬೇಸತ್ತ ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಬ್ರೂವರಿ ಮತ್ತು ಡಿಸ್ಟಿಲ್ಲರೀಸ್ ಅಸೋಸಿಯೇಷನ್ ಪ್ರತಿಭಟನೆಗೆ ಕರೆ ನೀಡಿದ್ದವು.
ಲೈಸೆನ್ಸ್ ದರ ಎಷ್ಟಿದೆ ?
ಸಿಎಲ್-9 ಬಾರ್ ಅಂಡ್ ರೆಸ್ಟೋರೆಂಟ್ ಪರವಾನಗಿಗೆ ಈ ಹಿಂದೆ 8.62 ಲಕ್ಷ ರೂ. ಶುಲ್ಕವಿತ್ತು. ಇದೀಗ ಶುಲ್ಕವನ್ನು15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಸೆಸ್ 2.25 ಲಕ್ಷ ರೂ. ಸೇರಿ ಒಟ್ಟು 17.25 ಲಕ್ಷ ರೂ. ಆಗಲಿದೆ. ಸಿಎಲ್ -6ಎ ಸ್ಟಾರ್ ಹೋಟೆಲ್ ಪರವಾನಗಿಗೆ 9.75 ಲಕ್ಷ ರೂ. ಶುಲ್ಕವಿತ್ತು. ಇದೀಗ 20 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಸೆಸ್ 3 ಲಕ್ಷ ರೂ. ಸೇರಿ ಒಟ್ಟು 23 ಲಕ್ಷ ರೂ. ಆಗಲಿದೆ. ಬ್ರೇವರಿಜ್ಗಳಿಗೆ ವಾರ್ಷಿಕ ಪರವಾನಗಿ ಶುಲ್ಕವನ್ನು 27 ಲಕ್ಷ ರೂ.ಗಳಿಂದ 54 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಡಿಸ್ಟಿಲ್ಲರಿ ಮತ್ತು ವೇರ್ಹೌಸ್ಗಳಿಗೆ 45 ಲಕ್ಷ ರೂ.ಗಳಿಂದ 90 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.