Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ | Pahlaj Nihalani passes away

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ : ಮಹಿಳಾ ಮೇಲ್ವಿಚಾರಕಿಯಾಗಿ ಬಡ್ತಿಗೆ ಹೈಕೋರ್ಟ್ ಆದೇಶ
KARNATAKA

BREAKING : ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ : ಮಹಿಳಾ ಮೇಲ್ವಿಚಾರಕಿಯಾಗಿ ಬಡ್ತಿಗೆ ಹೈಕೋರ್ಟ್ ಆದೇಶ

By ಸುರೇಶ್‌

ಬೆಂಗಳೂರು : ಕೊನೆಗೂ ಅಂಗನವಾಡಿ ಕಾರ್ಯಕರ್ತೆಯರ ದಶಕಗಳ ಕನಸು ಕೊನೆಗೂ ನನಸಾಗುವ ಕಾಲ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ‘ಮಹಿಳಾ ಮೇಲ್ವಿಚಾರಕಿ’ ಹುದ್ದೆಗಳಲ್ಲಿ ಶೇ.75 ಹುದ್ದೆಗಳಿಗೆ ಅರ್ಹ ಅಂಗನವಾಡಿ ಕಾರ್ಯಕರ್ತೆಯರು ಬಡ್ತಿ ಮೂಲಕ ನೇಮಕವಾಗಲಿದ್ದಾರೆ. ಈ ಸಂಬಂಧ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ಅರ್ಹರಿಗೆ ನ್ಯಾಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

2015 ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ಮಹಿಳಾ ಮೇಲ್ವಿಚಾರಕಿ ಹುದ್ದೆಗಳಲ್ಲಿ ಶೇ.50 ಸೇವಾ ಜೇಷ್ಠತೆ ಆಧಾರದಡಿ ಪದವೀಧರ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸುವಂತೆ ನಿರ್ದೇಶಿಸಿತ್ತು. ಈ ಅಧಿಸೂಚನೆ ಪರಿಗಣಿಸಿ ಬಡ್ತಿ ನೀಡುವಂತೆ ಹಲವಾರು ಅಂಗನವಾಡಿ ಕಾರ್ಯಕರ್ತೆಯರುಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಆದರೆ, ಸರ್ಕಾರದ ವೃಂದ ಮತ್ತು ನೇಮಕ ನಿಯಮಗಳಲ್ಲಿ ತಿ ದ್ದುಪಡಿ ಮಾಡದ ಕಾರಣ ಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ. ಬದಲಾಗಿ 557 ಮೇಲ್ವಿಚಾರಕಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಮುಂದಾಗಿತ್ತು. ಈ ನಿರ್ಧಾರ ಪ್ರಶ್ನಿಸಿ ಪ್ರಶ್ನಿಸಿ ಹೈಕೋರ್ಟ್‌ನ ಬೆಂಗಳೂರು ಮತ್ತು ಕಲಬುರಗಿ ಪೀಠಗಳಲ್ಲಿ ವಿವಿಧ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿ ವಿಚಾರಣೆ ನಡೆಸಿ ಫೇಬ್ರವರಿ ತಿಂಗಳಲ್ಲಿ ಆದೇಶ ನೀಡಿರುವ ಕಲಬುರಗಿ ಪೀಠ, ಅರ್ಹ ಅಂಗನವಾಡಿ ಕಾರ್ಯಕರ್ತೆಯರನ್ನು ಬಡ್ತಿ ಮೂಲಕ ಮಹಿಳಾ ಮೇಲ್ವಿಚಾರಕಿ ಹುದ್ದೆಗೆ ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರು ಪೀಠದಲ್ಲಿ ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಕಲಬುರಗಿ ಪೀಠದ ತೀರ್ಪನ್ನು ಉಲ್ಲೇಖಿಸಿ ಅರ್ಜಿ ಪರಿಗಣಿಸಿದೆ. ಅರ್ಜಿದಾರರ ಬೇಡಿಕೆಯಂತೆ ಅರ್ಹ ಅಂಗನವಾಡಿ ಕಾರ್ಯಕರ್ತೆಯರನ್ನು ಮಹಿಳಾ ಮೇಲ್ವಿಚಾರಕಿ ಹುದ್ದೆಗಳಿಗೆ ನೇಮಿಸುವಂತೆ ಆದೇಶಿಸಿದೆ. ಈ ಸಂಬಂಧ 4 ತಿಂಗಳೊಳಗೆ ಜಿಲ್ಲಾವಾರು ಸೇವಾ ಜೇಷ್ಠತೆ ಪಟ್ಟಿ ಬಿಡುಗಡೆ ಮಾಡಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ. ಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ಸಂದರ್ಶನ ಇರುವುದಿಲ್ಲ. ಬದಲಾಗಿ ಅಭ್ಯರ್ಥಿಗಳ ವಿದ್ಯಾರ್ಹತೆಯ ಅಂಕಗಳೊಂದಿಗೆ ಪ್ರತಿ 5 ವರ್ಷಗಳ ಸೇವಾ ಜೇಷ್ಠತೆಗೆ 4 ವೇಟೇಜ್ ಅಂಕ ನೀಡಬೇಕು. ಇದನ್ನು ಪರಿಗಣಿಸಿ ಬಡ್ತಿ ನೀಡಬೇಕು ಎಂದು ಹೈಕೋರ್ಟ್ ತಿಳಿಸಿದೆ.

Share. Facebook Twitter LinkedIn WhatsApp Email

Related Posts

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

2 Mins Read

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

2 Mins Read

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

1 Min Read
Recent News

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ | Pahlaj Nihalani passes away

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

State News
KARNATAKA

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಇಲ್ಲಿನ ಲಯನ್ಸ್ ಕ್ಲಬ್ ಸಾಗರ ಮತ್ತು ಪಿನಾಕಿ ಸ್ಟುಡಿಯೋಸ್ ಸಹಯೋಗದಲ್ಲಿ ಸಾಗರದ ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ‘ಮೂವಿಂಗ್…

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ : ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.