ಬೆಂಗಳೂರು : 18ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿದ್ದು ಈ ಒಂದು ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದರಿಂದ ಒಟ್ಟು 11 ಜನರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಇವಂದು ಪ್ರಕರಣದ ತನಿಖೆ ನಡೆಸಿರುವ ಸಿಐಡಿ ತಂಡ ಕಾಲ್ತುಳಿತಕ್ಕೆ ಫ್ರೀ ಟಿಕೆಟ್ ಘೋಷಿಸಿದ್ದೆ ಕಾರಣವಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಹೌದು ಕಳೆದ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಜನರು ಸಾವನ್ನಪ್ಪಿದ್ದರು. ಈ ಒಂದು ಪ್ರಕರಣ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಬೆಂಗಳೂರು ಕಮಿಷನರ್ ಬಿ. ದಯಾನಂದ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಬಳಿಕ ಈ ಒಂದು ಪ್ರಕರಣದ ತನಿಖೆ ನಡೆಸಿದ ಸಿಐಡಿ ತಂಡ ಎಂದು ಸರ್ಕಾರಕ್ಕೆ ತನಿಖೆಯ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕಾಲ್ತುಳಿತ ಘಟನೆಗೆ ಫ್ರೀ ಟಿಕೆಟ್ ಘೋಷಣೆ ಸೇರಿದಂತೆ ಹಲವು ಅಂಶಗಳನ್ನು ಸಿಐಡಿ ವರದಿಯಲ್ಲಿ ಉಲ್ಲೇಖಿಸಿದೆ.
ಆರ್ಸಿಬಿ ಸಿಇಓ ರಾಜೇಶ್ ಮೆನನ್ ಹಾಗು ನಿಖಿಲ್ ಸೋಸ್ಲೆ ಇಬ್ಬರಿಂದಲೇ ಕಾರ್ಯಕ್ರಮದ ಆಯೋಜನೆ ನಡೆದಿತ್ತು. ಆತುರದಲ್ಲಿ ಕಾರ್ಯಕ್ರಮವನ್ನು ಇಬ್ಬರು ಆಯೋಜನೆ ಮಾಡಿದ್ದಾರೆ. KSCA ಮೇಲೆ ಒತ್ತಡ ಹಾಕಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇನ್ನು ಆರ್ಸಿಬಿ ಟ್ವಿಟ್ ಮತ್ತು ಪೊಲೀಸ್ ಬಂದೋಬಸ್ ಬಗ್ಗೆ ಸಿಐಡಿ ತನಿಖೆ ನಡೆಸಿದ್ದು, ಇದೀಗ ತನಿಖೆ ನಡೆಸಿ ಸಿಐಡಿ ರಿಪೋರ್ಟ್ ನೀಡಲಿದೆ, ಕೊಹ್ಲಿ ವಿದೇಶಕ್ಕೆ ತೆರಳುವ ಕಾರಣಕೊಟ್ಟು ಕಾರ್ಯಕ್ರಮ ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ಒತ್ತಡ ಹೇರಿದ್ದ ಕೊಹ್ಲಿ ಆಪ್ತ ನಿಖಿಲ್ ಸೋಸ್ಲೆ ಕಾರ್ಯಕ್ರಮ ಮುಂದೂಡುವಂತೆ ಪೊಲೀಸರು ಹಾಗೂ ಕೆ ಎಸ್ ಸಿ ಎ ಮನವಿ ಮಾಡಿದ್ದರು. ಕೊಹ್ಲಿ ಹೇಳಿಕೆ ನೀಡಿದ್ದ ಮರುದಿನವೇ ಕಾರ್ಯಕ್ರಮ ಮಾಡೋದಕ್ಕೆ ಒತ್ತಡ ಹೇರಲಾಗಿತ್ತು . ಕೊಹ್ಲಿ ಯುಕೆಗೆ ಹೋಗಬೇಕು. ವಿದೇಶಕ್ಕೆ ಹೋದರೆ ಕೊಹ್ಲಿ ಮತ್ತೆ ಬರಲ್ಲ ಎಂದು ಹೇಳಿದ್ದು ಫ್ರೀ ಟಿಕೆಟ್ ಕುರಿತು ಗೊಂದಲದ ವಿಚಾರ ಪತ್ತೆಯಾಗಿದೆ. ಸಾಕಷ್ಟು ಅಭಿಮಾನಿಗಳು ಸೇರಿದ್ದು ಪತ್ತೆಯಾಗಿದೆ.
ಇನ್ನು ಬಂದೋಬಸ್ತ್ ನಲ್ಲಿ ಎಡವಟ್ಟಗಿದ್ದು, ಸರಿಯಾಗಿ ರೋಲ್ ಕಾಲ್ ಆಗಿಲ್ಲ ಕಾಲ್ತುಳಿತದ ವೇಳೆ ಗೇಟ್ ಗಳ ಬಳಿ ಪೊಲೀಸರೇ ಇರಲಿಲ್ಲ. ವಿಧಾನಸೌಧದ ಬಳಿಗೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕೆ ಎಸ್ ಆರ್ ಪಿ ಸಿಬ್ಬಂದಿ ಇರಲಿಲ್ಲ ಸರಿಯಾದ ಸೂಚನೆ ಕೂಡ ಅವರಿಗೆ ನೀಡಲಿಲ್ಲ. ಲಕ್ಷಾಂತರ ಜನ ಸೇರುತ್ತಾರೆ ಅಂತ ಕೆಎಸ್‌ಆರ್‌ಪಿ ತುಕಡಿಗೂ ಸೂಚನೆ ನೀಡಿರಲಿಲ್ಲ ಎಂದು ಸಿಐಡಿ ತನಿಖೆಯ ವೇಳೆ ಆರ್ಸಿಬಿ ಮ್ಯಾನೇಜ್ಮೆಂಟ್ ಬಯಲಾಗಿದೆ.