ತುಮಕೂರು : ತುಮಕೂರಿನ ಮಾಜಿ ಶಾಸಕ ಡಿಸಿ ಗೌರಿಶಂಕರ್ ಅವರು ಶಾಸಕ ಸುರೇಶ್ ಗೌಡರ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ಗೌರಿಶಂಕರ್ ಅವರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೊಂಡು, ಗೃಹ ಸಚಿವರ ರಕ್ಷಣೆ ಕೋರಿದ್ದಾರೆ. ಸುರೇಶ ಗೌಡ ನನ್ನ ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುರೇಶ್ ಗೌಡ ನನ್ನನ್ನು ಕೊಲೆ ಮಾಡಿಸುತ್ತೀಯಾ? ಗೃಹ ಸಚಿವರನ್ನು ಭೇಟಿ ಮಾಡಿ ರಕ್ಷಣೆ ಕೋರಿ ಮನವಿ ಮಾಡುತ್ತೇನೆ. ನನಗೆ ಏನೇ ಆದರೂ ಅದಕ್ಕೆ ಸುರೇಶ್ ಗೌಡ ಕಾರಣನಾಗುತ್ತಾನೆ.ರಾಜಕೀಯ ಲಾಭಕ್ಕಾಗಿ ನಿಮ್ಮಿಷ್ಟ ಬಂದಂಗೆ ಹೋರಾಟ ಮಾಡಿಕೊಂಡರೆ ಅದಕ್ಕೆಲ್ಲಾ ನಾವು ಸೊಪ್ಪು ಹಾಕಲ್ಲ ಎಂದು ತುಮಕೂರಿನಲ್ಲಿ ಮಾಜಿ ಶಾಸಕ ಗೌರಿ ಶಂಕರ್ ಗಂಭೀರವಾದ ಆರೋಪ ಮಾಡಿದರು.
ನನ್ನ ಮೇಲೆ ಕೇಸ್ ಹಾಕಿದ್ದೇನೆ ಎಂದು ಹೇಳಿದ್ದಾನೆ, ಕೋರ್ಟ್ನಲ್ಲಿದ್ದಾಗ ಮಾತನಾಡಬಾರದು ಎಂಬ ಅರಿವಿಲ್ಲದ ಅಜ್ಞಾನಿ. ಸ್ನೇಹಿತ ಎಂದು ಹೇಳಿದವನು, ಡೆಲ್ಲಿಗೆ ಹೋಗಿ ಬಂದ್ಮೇಲೆ ಇಂಜೆಕ್ಷನ್ ಕೊಟ್ಟವರು ಯಾರು? ಪಟ್ಟಿ ಮಾಡಿಕೊಂಡು ಬಂದು ಹೇಳಿಕೆ ಕೊಟ್ಟಿದ್ದಿಯಲ್ಲ ಯಾರು ನಿನಗೆ ಹೇಳಿಕೊಟ್ಟಿದ್ದರು? ಎಂದು ಪ್ರಶ್ನಿಸಿದ್ದಾರೆ.
ಗೃಹ ಖಾತೆಯಲ್ಲಿ ಸದ್ಯಕ್ಕೆ ಯಾರೂ ಡ್ರೈವ್ ಮಾಡುವ ಅಗತ್ಯವಿಲ್ಲ. ನಿಮ್ಮ ಕೇಂದ್ರ ಸಚಿವರೇ ಅವರ ಬಗ್ಗೆ ಹೊಗಳಿಕೆ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ಪರಮೇಶ್ವರ್ ಸಾಹೇಬ್ರು ಮನೆಗೆ ಹೋಗಿ ಕಾಲಿಗೆ ಬಿದ್ದಿದ್ದೀರಿ. ನನಗೆ ನಿಮ್ಮ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನೀವು ನಮ್ಮ ಕ್ಷೇತ್ರದ ಜನರಿಗೆ ನೀಡಿರುವ ಆಶ್ವಾಸನೆ ಕೊಟ್ಟಿರುವುದನ್ನ ಈಡೇರಿಸಿ ಎಂದು ಕೇಳುತ್ತಿದ್ದೇನೆ. ನಾನು ನಂದೇ ಎಂಬ ದುರಹಂಕಾರದ ಮಾತುಗಳು ಬೇಡ ಎಂದು ಕಿಡಿಕಾರಿದ್ದಾರೆ.
ಸುರೇಶ್ ಗೌಡರೇ ನಿಮ್ಮ ತಲೆಯಲ್ಲಿ ಬಿಳಿಕೂದಲು ಇವೆ. ನೀವು ಅವಮಾನ ಮಾಡಿದ್ದು, ಹಾಲಪ್ಪನಿಗೆ ಅಲ್ಲಾ ಕುಂಚಿಟಿಗ ಸಮಾಜದವರಿಗೆ ನಿಂದಿಸುತ್ತಿದ್ದೀರಾ. ಡಾ. ಜಿ ಪರಮೇಶ್ವರ್ಗೆ ನಿಂದಿಸಿದರೆ ಅದು ದಲಿತ ಸಮಾಜಕ್ಕೆ ನಿಂದಿಸಿದಂತೆ. ರಾಜಣ್ಣ ಬಗ್ಗೆ ಮಾತನಾಡಿದ್ದರೆ ನಾಯಕ ಸಮಾಜಕ್ಕೆ ಅಗೌರವ ಕೊಟ್ಟಂತೆ. ನನ್ನ ತಂದೆ ಬಗ್ಗೆ ಮಾತನಾಡಿದ ನಿನ್ನ ಮೇಲೂ ನಾನು ಮಾನನಷ್ಟ ಮೊಕದ್ದಮೆ ಹೂಡಬಹುದು ಎಂದಿದ್ದಾರೆ.