ಬೆಂಗಳೂರು : ಬಡ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಮಂಚಕ್ಕೆ ಕರೆದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬ್ರಹ್ಮಾನಂದ ಗುರೂಜಿ ಹಾಗೂ ಆತನ ಪತ್ನಿ ವಿರುದ್ಧ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತ ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಗುರೂಜಿ ಮತ್ತು ಆತನ ಪತ್ನಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪದೇ ಪದೇ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ಸ್ವಾಮೀಜಿ ನಿಂದಿಸಿದ್ದಾರೆ. ನನ್ನ ಜೊತೆ ಬಂದು ಮಲಗು ಎಂದು ತೊಂದರೆ ನೀಡಿದ್ದಾರೆ ಎಂದು ಮಹಿಳೆಯ ಪತಿ ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಬ್ರಹ್ಮಾಂನಂದ ಗುರೂಜಿ ಮತ್ತು ಆತನ ಪತ್ನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.








