ಬೆಂಗಳೂರು : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಸಿದ್ದು, ಇದೀಗ ಮೇ 20ಕ್ಕೆ ಜಾಮೀನು ಅರ್ಜಿ ತೀರ್ಪಿನ ಆದೇಶವನ್ನು ಕಾಯ್ದಿರಿಸಿದೆ.
ಎಚ್ ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೇ 20ಕ್ಕೆ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ ಎಂದು ಹೇಳಲಾಗಿದೆ. ಅಲ್ಲಿಯವರೆಗೆ ಮಧ್ಯಂತರ ಜಾಮೀನು ಮುಂದುವರಿಯಲಿದೆ.
ಜಾಮೀನು ಅರ್ಜಿ ಸ್ವೀಕಾರರ್ಹತೆ ಬಗ್ಗೆ ಇದೀಗ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ ಎಂದು ತಿಳಿದುಬಂದಿದೆ. ಈ ವೇಳೆ ಕೋರ್ಟಿಂದ ತೆರಳಲು ಎಚ್ ಡಿ ರೇವಣ್ಣಗೆ ಅನುಮತಿ ನೀಡಲಾಯಿತು. ಕೋರ್ಟಿಂದ ಅನುಮತಿ ಪಡೆದು ಎಚ್ಡಿ ರೇವಣ್ಣ ನ್ಯಾಯಾಲಯದಿಂದ ತೆರಳಿದರು.
ಹೌದು ಇಂದು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಖುದ್ದು ಹಾಜರಾದ ಶಾಸಕ ಎಚ್ಡಿ ರೇವಣ್ಣ. ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಶಾಸಕ ಎಚ್ ಡಿ ರೇವಣ್ಣ ಅವರ ಪರವಾಗಿ ಸಿವಿ ನಾಗೇಶ್ ವಾದ ಮಂಡಿಸಿದರೆ, ಎಸ್ ಐ ಟಿ ಪರ ಎಸ್ಪಿಪಿ ಜೈನಾ ಕೋಥಾರಿ ಅವರು ಪ್ರತಿವಾದವನ್ನು ಮಂಡಿಸಿದರು.
ಸಂತ್ರಸೆಯ ಹೇಳಿಕೆ ಬಳಿಕ ಅತ್ಯಾಚಾರ ಆರೋಪ ದಾಖಲಿಸಲಾಗಿದೆ. ತನಿಖಾಧಿಕಾರಿಯ ಮನವಿ ನಂತರ ಸೆಕ್ಷನ್ 376 ಸೇರಿಸಲಾಗಿದೆ. ಮೊದಲಿಗೆ ಈ ಕೆಸ್ ನಲ್ಲಿ ಸೆಕ್ಷನ್ 354 AD ಮಾತ್ರ ಇತ್ತು. ಸೆಕ್ಷನ್ 376 ಸೇರ್ಪಡೆಗೆ ನಂತರ ಅರ್ಜಿ ಸಲ್ಲಿಸಲಾಯಿತು ಎಂದು ವಕೀಲೆ ಜಾಯ್ನಾ ಕೊಥರಿ ಅವರು ವಾದ ಮಂಡಿಸಿದರು.
ಒಮ್ಮೆ ಅತ್ಯಾಚಾರ ಆರೋಪದ ದಾಖಲಾದರೆ, ಮ್ಯಾಜಿಸ್ಟ್ರೆಟ್ ನ್ಯಾಯಾಲಯಕ್ಕೆ ವ್ಯಾಪ್ತಿ ಇಲ್ಲ. ಬೇಲ್ ವಿಚಾರಣೆ ನಡೆಸಲು ಈ ಕೋರ್ಟಿಗೆ ವ್ಯಾಪ್ತಿ ಇಲ್ಲ.ಸೆಕ್ಷನ್ 436 ಅಡಿಯಲ್ಲಿ ರೇವಣ್ಣ ಕೋರ್ಟಿಗೆ ಹಾಜರಾಗಿದ್ದಾರೆ.ಆದರೆ ಐಪಿಸಿ ಸೆಕ್ಷನ್ 376 ಇರುವುದರಿಂದ ಜಾಮೀನು ಅರ್ಜಿ ಊರ್ಜಿತವಲ್ಲ.376 ಆರೋಪವಿದ್ದಾಗ ದೂರನ್ನು ವಿಭಜಿಸಲು ಆ ಸಾಧ್ಯವಿಲ್ಲ. ಇಬ್ಬರಿಂದಲೂ ಲೈಂಗಿಕ ದೌರ್ಜನ್ಯ ಆಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಎಂದು ಜೈಯ್ನ ಕೋತಾರಿ ವಾದ ಮಂಡಿಸಿದರು.
ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪ ಇಲ್ಲ ಅಂತ ಹೇಳಲಾಗದು .ಸೆಕ್ಷನ್ 41 ಅಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು ಅವರು ವಿಚಾರಣೆಗೆ ಬಂದಿಲ್ಲ. ಇದನ್ನು ಜಾಮೀನು ಅರ್ಜಿಯ ವಿಚಾರಣೆ ವೇಳೆ ಹೇಳುತ್ತೇನೆ. ಈಗ ಜಾಮೀನು ಅರ್ಜಿ ವಿಚಾರಣೆಗೆ ಸ್ವೀಕರಿಸಬಾರದೆಂಬ ವಿಚಾರಕ್ಕಷ್ಟೇ ವಾದಿಸುತ್ತಿದ್ದೇನೆ ಎಂದು ಕೊಥಾರಿ ವಾದ ಮಂಡಿಸಿದರು.