ಮಂಡ್ಯ: ತಮ್ಮ ಜಮೀನು ಸಮಸ್ಯೆಗೆ ಬಗೆಹರಿಯದಿದ್ದಕ್ಕೆ ಮಂಡ್ಯ ಡಿಸಿ ಕಚೇರಿ ಎದುರಿನ ಪಾರ್ಕ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರೈತ ಮಂಜೇಗೌಡ ಕೆ.ಆರ್.ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದವರಾಗಿದ್ದಾರೆ. ಹಲವು ವರ್ಷಗಳಿಂದ ಬಗೆಯರಿದ ಜಮೀನು ಸಮಸ್ಯೆಯಾಗಿತ್ತು. ಈ ಸಂಬಂಧ ತಾಲೂಕು ಕಚೇರಿಗೆ ಅಲೆದು ಮಂಜೇಗೌಡ ಸುಸ್ತಾಗಿದ್ದರು. ಜಿಲ್ಲಾಧಿಕಾರಿ ಕಚೇರಿಗೂ ಹಲವು ಬಾರಿ ರೈತ ಮಂಜೇಗೌಡ ಅಲೆದಾಡಿದ್ದರು. ಇಷ್ಟಾದರೂ ಜಮೀನು ಸಮಸ್ಯೆ ಬಗೆಹರಿದಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆಗೆ ರೈತ ಮಂಜೇಗೌಡ ಯತ್ನಿಸಿದ್ದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರಿನ ಪಾರ್ಕ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ರೈತ ಮಂಜೇಗೌಡ ಬೆಂಕಿ ಹಚ್ಚಿಕೊಂಡಿದ್ದರು. ಈ ದೃಶ್ಯ ಕಂಡು ಸ್ಥಳೀಯರು ಕೂಡಲೇ ಬೆಂಕಿ ಹಾರಿಸಿದ್ದಾರೆ. ಗಾಯಗೊಂಡಿದ್ದ ಮಂಜೇಗೌಡರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.








