ನವದೆಹಲಿ : ರಸ್ತೆ ಅಪಘಾತದಲ್ಲಿ ಖ್ಯಾತ ಪಂಜಾಬಿ ಗಾಯಕ ಹರ್ಮನ್ ಸಿಧು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬಿ ಮನರಂಜನಾ ಜಗತ್ತು ಗಾಯಕ ಹರ್ಮನ್ ಸಿಧು ಅವರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸುದ್ದಿವಾಗಿದ್ದು, ಅವರಿಗೆ 37 ವರ್ಷ ವಯಸ್ಸಾಗಿತ್ತು.
ಪಂಜಾಬ್’ನ ಪಟಿಯಾಲದಿಂದ ಮಾನ್ಸಾಗೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಸಂಗೀತಗಾರ ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ, ಅವರು ಮನೆಗೆ ಹಿಂದಿರುಗುತ್ತಿದ್ದಾಗ ಅವರ ಕಾರು ಟ್ರಕ್’ಗೆ ಡಿಕ್ಕಿ ಹೊಡೆದಿದೆ.
ವರದಿಗಳ ಪ್ರಕಾರ, ಅಪಘಾತವು ಅತ್ಯಂತ ಭೀಕರವಾಗಿದ್ದು, ಬದುಕುಳಿಯುವ ಸಾಧ್ಯತೆಯೇ ಇಲ್ಲ. ಅಪಘಾತದಲ್ಲಿ ಅವರ ಕಾರು ಗುರುತಿಸಲಾಗದಷ್ಟು ನಾಶವಾಗಿದೆ.
ಟ್ರಾವಿಸ್ ಸ್ಕಾಟ್ ಮುಂಬೈ ಸಂಗೀತ ಕಚೇರಿಯಲ್ಲಿ ಗೊಂದಲ: 18 ಲಕ್ಷ ಮೌಲ್ಯದ ಚಿನ್ನ ಕಳ್ಳತನ








