ನವದೆಹಲಿ : ದೆಹಲಿಯ ಕೆಂಪು ಕೋಟೆಯ ಬಳಿ ಕಾರು ಬಾಂಬ್ ಸ್ಫೋಟದಲ್ಲಿ ಇದುವರೆಗೂ 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 17 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಗಾಯಗೊಂಡ ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಒಂದು ಪ್ರಕರಣದ ತನಿಖೆ ಸದ್ಯ ಎನ್ಐಎ ನಡೆಸುತ್ತಿದ್ದು ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ಅಂಶಗಳು ಬಯಲಾಗಿವೆ.
ಹೌದು ಸ್ವಲ್ಪ ಯಾಮಾರಿದರೂ ಕೂಡ ದೊಡ್ಡ ದುರಂತ ಸಂಭವಿಸುತ್ತಿತ್ತು. ಸ್ಪೋಟಕ ವಶಕ್ಕೆ ಪಡೆದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ದೇಶದ ಹಲವು ಕಡೆಗೆ ಉಗ್ರರು ಸ್ಪೋಟಿಸಲು ದೊಡ್ಡ ಸಂಚು ರೂಪಿಸಿದ್ದರು. ಶಂಕಿತ ಉಗ್ರರ ಗ್ಯಾಂಗ್ ಈ ಒಂದು ಸಂಚು ರೂಪಿಸಿತ್ತು ಎಂದು ಎನ್ ಐ ಎ ಅಧಿಕಾರಿಗಳ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ದೇಶದ ಹಲವು ಸ್ಥಳಗಳಲ್ಲಿ ಸ್ಫೋಟಕಗಳಿಂದ ಬ್ಲಾಸ್ಟ್ ಗೆ ಉಗ್ರರು ಸಂಚು ರೂಪಿಸಿದ್ದರು ಜಮುವಿನಲ್ಲಿ ಮೊದಲೇ 2,900 ಕೆಜಿ ಸ್ಫೋಟಕ ವಶಕ್ಕೆ ಪಡೆದುಕೊಂಡಿದ್ದರು. ತಕ್ಷಣ ಅಲರ್ಟ್ ಆದ ಗುಪ್ತಚರ ಇಲಾಖೆ ಕಾರ್ಯಾಚರಣೆ ನಡೆಸಿದೆ. ಭಾರಿ ಪ್ರಮಾಣದ ಸ್ಪೋಟಕಗಳನ್ನು ವಶಕ್ಕೆ ಪಡೆಯುವುದರ ಮೂಲಕ ಭಾರಿ ದುರಂತ ಒಂದು ತಪ್ಪಿದೆ.ಅಕಸ್ಮಾತ್ ಸ್ವಲ್ಪ ಯಾಮಾರಿದ್ರು ದಾಳಿ ಮತ್ತಷ್ಟು ಭೀಕರವಾಗಿ ಇರುತ್ತಿತ್ತು ಎಂದು ಮಾಹಿತಿ ತಿಳಿದು ಬಂದಿದೆ.
ದೆಹಲಿಯ ಕೆಂಪು ಕೋಟೆ ಬಳಿ ಕಾಟ್ರೇಡ್ಜ್ ಪತ್ತೆಯಾಗಿದೆ.ಸ್ಪೋಟದ ಸ್ಥಳದಲ್ಲಿ ಎರಡು ಲೈವ್ ಕಾಟ್ರೇಡ್ಜ್ ಪತ್ತೆಯಾಗಿದೆ ಸ್ಥಳದಲ್ಲಿ ಎರಡು ರೀತಿಯ ಸ್ಪೋಟಕ ಮಾದರಿಯನ್ನು ವಶಕ್ಕೆ ಪಡೆದುಕೊಂಡಿದ್ದು ಮೊದಲ ಮಾದರಿಯದ ಅಮೋನಿಯಂ ನೈಟ್ರೇಟ್ ಹಾಗೂ ಎರಡನೇ ಮಾದರಿ ನೈಟ್ ಗಿಂತಲೂ ಡೇಂಜರ್ ಎಂದು ತಿಳಿದುಬಂದಿದ್ದು ಅಮೋನಿಯಂ ನೈಟ್ರೇಟ್ ಗಿಂತಲೂ ಎರಡನೇ ಮಾದರಿ ಬಹಳ ಡೇಂಜರ್ ಎಂದು ತಿಳಿದು ಬಂದಿದೆ.








