ಬೆಂಗಳೂರು : ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವಾಗಿ ಮಹತ್ವದ ಸುಳಿವು ನೀಡಿದ್ದಾರೆ. ಯಾವಾಗ ರಾಜಕಾರಣಕ್ಕೆ ಬರಬೇಕು ಎಂದು ತೀರ್ಮಾನಿಸುತ್ತೇನೆ ಎಂದು ಹೇಳುವ ಮೂಲಕ ರಾಜರಾಜಕಾರಣಕ್ಕೆ ಬರುವ ಕುರಿತು ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪರೋಕ್ಷವಾಗಿ 2028ಕ್ಕೆ ರಾಜ್ಯ ರಾಜಕೀಯಕ್ಕೆ ಬರುವ ಬಗ್ಗೆ ಸುಳಿವು ನೀಡಿದ್ದಾರೆ.ನಾನು ಎಲ್ಲಿರಬೇಕು ಅಂತ ರಾಜ್ಯದ ಜನ ತೀರ್ಮಾನ ಮಾಡುತ್ತಾರೆ. ಬಿಜೆಪಿ ಮತ್ತು ನಾವು ಮೈತ್ರಿ ಮಾಡಿಕೊಂಡಿದ್ದು ಯಾವುದೇ ರೀತಿ ಗೊಂದಲ ಇರಬಾರದು ರಾಜ್ಯದಲ್ಲಿ ಒಳ್ಳೆ ಸರ್ಕಾರ ಅಧಿಕಾರಕ್ಕೆ ಬಂದವು ಜನರು ನೆಮ್ಮದಿಯಾಗಿ ಇರಬೇಕು ಎಂದು ಅವರು ತಿಳಿಸಿದರು








