ಕೊಲ್ಕತ್ತಾ : ಕೊಲ್ಕತ್ತಾ ಏರ್ಪೋರ್ಟ್ ನಲ್ಲಿ ವಿಮಾನ ಒಂದು ತುರ್ತು ಭೂಸ್ಪರ್ಶ ಮಾಡಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಏರ್ಪೋರ್ಟ್ ನಲ್ಲಿ ಈ ಒಂದು ಘಟನೆ ನಡೆದಿದ್ದು, ನೇಪಾಳದಿಂದ ವಿಮಾನ ಹೊರಟಿತು ಟರ್ಕಿ ಏರ್ಲೈನ್ಸ್ ನ TK-727 ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದ ಇಂಜಿನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕೋಲ್ಕತ್ತಾ ವಾಯು ಪ್ರದೇಶ ಮೂಲಕ ಈ ಒಂದು ವಿಮಾನ ಇಸ್ತಾನ್ ಬುಲ್ ಗೆ ಹೊರಟಿತ್ತು.
ಇಂಜಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್ ಎಟಿಸಿ ಸಂಪರ್ಕ ಮಾಡಿದ್ದಾರೆ. ಕೊಲ್ಕತ್ತಾ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನು ಪೈಲೆಟ್ ಸಂಪರ್ಕಿಸಿದ್ದಾರೆ ಎಟಿಸಿ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಫ್ಲೈಟ್ ಲ್ಯಾಂಡಿಂಗ್ ಆಗಿದೆ ವಿಮಾನದಲ್ಲಿ ಇದ್ದಂತಹ 236 ಪ್ರಯಾಣಿಕರು ಕೂಡ ಸೇಫ್ ಆಗಿದ್ದಾರೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.








