Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : `ರೇಷನ್ ಸಮಸ್ಯೆ’ ನಿವಾರಣೆಗೆ ಬರುತ್ತಿದೆ ‘ಸ್ಮಾರ್ಟ್ ಅನ್ನವಾಣಿ’!

ರಾಜ್ಯದ ಜನರೇ ಗಮನಿಸಿ : ಜೂನ್.30ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ.!

BIG NEWS : ದಾಂಪತ್ಯ ಜೀವನದಲ್ಲಿ ಉಂಟಾಗುವ ಸಾಮಾನ್ಯ ಭಿನ್ನಾಭಿಪ್ರಾಯ `ಕ್ರಿಮಿನಲ್ ಅಪರಾಧವಲ್ಲ’ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಕ್ರಮ ಮರಳು ದಾಸ್ತಾನು: ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲು
KARNATAKA

ಸಾಗರದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಕ್ರಮ ಮರಳು ದಾಸ್ತಾನು: ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲು

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ತಾಲೂಕಿನ ಆನಂದಪುರ ಸಮೀಪದ ಆಚಾಪುರ ಬಳಿ ಇರುವ ‘ಕ್ರಿಯೇಟಿವ್ ಇಂಟರ್ ನ್ಯಾಷನಲ್ ಸ್ಕೂಲ್’ ಆವರಣದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಅಕ್ರಮ ಪತ್ತೆಯಾದದ್ದು ಹೇಗೆ?

ಕರ್ನಾಟಕ ಲೋಕಾಯುಕ್ತ ಇನ್‌ಸ್ಪೆಕ್ಟರ್ ನೀಡಿದ ಸೂಚನೆಯ ಮೇರೆಗೆ ಹಿರಿಯ ಭೂ ವಿಜ್ಞಾನಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಶಾಲೆಯ ಆವರಣದಲ್ಲಿ ತಪಾಸಣೆ ನಡೆಸಿದರು. ಈ ವೇಳೆ ಆಚಾಪುರದಲ್ಲಿರುವ ಶಾಲೆಯ ಆವರಣದಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಮರಳನ್ನು ಸಂಗ್ರಹಿಸಿಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಪ್ರಕರಣದ ವಿವರ:

  • ದಾಸ್ತಾನು ಪ್ರಮಾಣ: ಶಾಲೆಯ ಆವರಣದಲ್ಲಿ ಒಟ್ಟು 264 ಮೆಟ್ರಿಕ್ ಟನ್ ಮರಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು.

  • ದಾಖಲೆಗಳ ಕೊರತೆ: ಈ ಮರಳಿಗೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕರನ್ನು ವಿಚಾರಿಸಿದಾಗ, ಯಾವುದೇ ಅಧಿಕೃತ ಪರವಾನಗಿ ಅಥವಾ ದಾಖಲೆಗಳನ್ನು ಹಾಜರುಪಡಿಸಲು ಅವರು ವಿಫಲರಾಗಿದ್ದಾರೆ.

  • ತಂತ್ರಾಂಶದಲ್ಲಿ ಮಾಹಿತಿ ಇಲ್ಲ: ಸರ್ಕಾರದ ಸಂಬಂಧಿತ ಇಲಾಖೆಯ ತಂತ್ರಾಂಶದಲ್ಲಿಯೂ ಆಚಾಪುರ ಸ್ಥಳಕ್ಕೆ ಸಂಬಂಧಿಸಿದಂತೆ ಮರಳು ದಾಸ್ತಾನಿಗೆ ಯಾವುದೇ ಅನುಮತಿ ಪಡೆದಿರುವುದು ಕಂಡುಬಂದಿಲ್ಲ.

ದೂರು ದಾಖಲು:

ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿ ದಾಸ್ತಾನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಜ್ಯೋತಿ ಕೆ.ಕೆ. ಅವರು ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಈ ದೂರು ಆಧರಿಸಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಕ್ರಿಯೆಟಿವ್ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಕೇಸ್ ದಾಖಲಾಗಿದೆ.

ಇನ್ನೂ ಶಾಲೆಯಂತಹ ಶೈಕ್ಷಣಿಕ ಸಂಸ್ಥೆಯ ಆವರಣದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳು ಪತ್ತೆಯಾಗಿರುವುದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.

ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾದರೆ ಅಧಿಕಾರಿಗಳೇ ಜವಾಬ್ದಾರರು: ಜಿಪಂ ಸಿಇಒಗಳಿಗೆ ಪ್ರಿಯಾಂಕ್‌ ಖರ್ಗೆ ಖಡಕ್ ಎಚ್ಚರಿಕೆ

ಚಂದ್ರದ್ರೋಣ ಪರ್ವತದಲ್ಲಿ ಚಾರಣಕ್ಕೆ ಹೋಗಿದ್ದ ಬಾಲಕಿ ನಾಪತ್ತೆ: ಶೋಧಕ್ಕೆ ಅರಣ್ಯ ಇಲಾಖೆ ಬೆಂಬಲಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : `ರೇಷನ್ ಸಮಸ್ಯೆ’ ನಿವಾರಣೆಗೆ ಬರುತ್ತಿದೆ ‘ಸ್ಮಾರ್ಟ್ ಅನ್ನವಾಣಿ’!

2 Mins Read

ರಾಜ್ಯದ ಜನರೇ ಗಮನಿಸಿ : ಜೂನ್.30ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ.!

4 Mins Read

ಇಂದು ಮಧ್ಯಾಹ್ನ 12 ಗಂಟೆಗೆ ಕರ್ನಾಟಕ `UG-CET’ ಪರೀಕ್ಷೆಯ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ |UG-CET Result 2026

1 Min Read
Recent News

BIG NEWS : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : `ರೇಷನ್ ಸಮಸ್ಯೆ’ ನಿವಾರಣೆಗೆ ಬರುತ್ತಿದೆ ‘ಸ್ಮಾರ್ಟ್ ಅನ್ನವಾಣಿ’!

ರಾಜ್ಯದ ಜನರೇ ಗಮನಿಸಿ : ಜೂನ್.30ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ.!

BIG NEWS : ದಾಂಪತ್ಯ ಜೀವನದಲ್ಲಿ ಉಂಟಾಗುವ ಸಾಮಾನ್ಯ ಭಿನ್ನಾಭಿಪ್ರಾಯ `ಕ್ರಿಮಿನಲ್ ಅಪರಾಧವಲ್ಲ’ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಇಂದು ಮಧ್ಯಾಹ್ನ 12 ಗಂಟೆಗೆ ಕರ್ನಾಟಕ `UG-CET’ ಪರೀಕ್ಷೆಯ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ |UG-CET Result 2026

State News
KARNATAKA

BIG NEWS : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : `ರೇಷನ್ ಸಮಸ್ಯೆ’ ನಿವಾರಣೆಗೆ ಬರುತ್ತಿದೆ ‘ಸ್ಮಾರ್ಟ್ ಅನ್ನವಾಣಿ’!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ (Ration Card Holders) ಆಹಾರ ಇಲಾಖೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೇಷನ್…

ರಾಜ್ಯದ ಜನರೇ ಗಮನಿಸಿ : ಜೂನ್.30ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ.!

ಇಂದು ಮಧ್ಯಾಹ್ನ 12 ಗಂಟೆಗೆ ಕರ್ನಾಟಕ `UG-CET’ ಪರೀಕ್ಷೆಯ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ |UG-CET Result 2026

GOOD NEWS : `ರಾಜ್ಯ ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ನಿವೃತ್ತಿ ಹಿಂದಿನ ದಿನ ‘ಕಾಲ್ಪನಿಕ ವೇತನ ಬಡ್ತಿ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.