ಬೆಂಗಳೂರು : ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ನಿಂದ ವೃದ್ಧರೊಬ್ಬರು ಬರೋಬ್ಬರಿ 1.32 ಕೋಟಿ ರೂ. ಕಳೆದುಕೊಂಡ ಘಟನೆ ನಡೆದಿದೆ.
ಬೆಂಗಳೂರಿನ ಯಲಹಂಕ ನಿವಾಸಿ ವರದರಾಜನ್ (83) ಡಿಜಿಟಲ್ ಅರೆಸ್ಟ್ ಮಾಡಿ ವಂಚಕರು 1.32 ಕೋಟಿ ರೂ. ವಂಚಿಸಿದ್ದಾರೆ. ಆರ್ ಬಿಐ, ಮುಂಬೈ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡಿದ್ದಾರೆ.
ಮನಿಲಾಂಡರಿಂಗ್ ಆಗಿದೆ ಎಂದು ಹೆದರಿಸಿ 1.32 ಕೋಟಿ ರೂ. ಪಡೆದು ವೃದ್ಧರಿಗೆ ವಂಚಿಸಿದ್ದಾರೆ. ನವೆಂಬರ್ 19ರಿಂದ ಡಿಸೆಂಬರ್ 6ರವರೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಹಣ ಹಾಕಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಲಂಡನ್ ನಲ್ಲಿ ವೃದ್ಧ ವರದರಾಜನ್ ಇಬ್ಬರು ಮಕ್ಕಳು ನೆಲೆಸಿದ್ದಾರೆ. ವಂಚನೆ ಸಂಬಂಧ ವೃದ್ಧ ವರದರಾಜನ್ ಅವರು ಈಶಾನ್ಯ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕರೇ ಎಚ್ಚರ : ಈ ರೀತಿ ‘ಡಿಜಿಟಲ್ ಅರೆಸ್ಟ್’ ವಂಚನೆಗೆ ಬಲಿಯಾಗದಿರಿ.!
ನೀವು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧೆಡೆಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದರಿಂದಲೇ ಇಂದು ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳಅಳೋದು ತಪ್ಪಿಸಿ, ಡಿಜಿಟಲ್ ಅರೆಸ್ಟ್ ನಿಂದ ದೂರಾಗಿ ಎಂಬುದಾಗಿ ಸರ್ಕಾರ ಎಚ್ಚರಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದಕ್ಕೂ ಮುನ್ನ ಎಚ್ಚರದಿಂದಿರಿ! ಡಿಜಿಟಲ್ ಅರೆಸ್ಟ್‌ನಂತಹ ವಂಚನೆಗೆ ಬಲಿಯಾಗದಿರಿ ಎಂಬುದಾಗಿ ತಿಳಿಸಿದೆ.
ವಂಚಕರು ಸರ್ಕಾರಿ ಅಧಿಕಾರಿಗಳ / ಪೊಲೀಸರ ಸೋಗಿನಲ್ಲಿ ವಾಟ್ಸಾಪ್ ಕರೆ ಮಾಡಿ, ಅಪರಾಧ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಬಹುದು. ಈ ಬಗ್ಗೆ ಜಾಗರೂಕರಾಗಿರಿ. ಸಂಶಯಾಸ್ಪದ ಕರೆಗಳು ಬಂದಲ್ಲಿ ತಕ್ಷಣವೇ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಿ ಅಥವಾ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೂ ಮಾಹಿತಿ ನೀಡಬಹುದು ಎಂದು ತಿಳಿಸಿದೆ.








