ಬೆಂಗಳೂರು : ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಹಾಗೂ ಪುತ್ರ ನಾಲಪಾಡ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪುತ್ರ ಪ್ರತಿಕ್ರಿಯೆ ನೀಡಿದ್ದು ಇಡಿ ದಾಳಿಗೂ ನಮ್ಮ ತಂದೆಗೂ ಯಾವುದೇ ರೀತಿ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಮ್ಮದ್ ನಲಪಾಡ್ ಇಡಿ ದಾಳಿ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು, ಈ ಒಂದು ದಾಳಿಗೂ ನಮ್ಮ ತಂದೆಗೂ ಯಾವುದೇ ಸಂಬಂಧವಿಲ್ಲ. ಇದು ರಾಜಕೀಯ ಪ್ರೇರಿತ ದಾಳಿ. ನಾನೆಲ್ಲೂ ಕೂಡ ತಪ್ಪು ಮಾಡಿಲ್ಲ ಶ್ರೀಕಿ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಹಲವಾರು ಜೊತೆ ನನಗೆ ಸ್ನೇಹವಿದೆ ಆದರೆ ನಾನು ನನ್ನ ಸಹೋದರ ಯಾವ ತಪ್ಪು ಸಹ ಮಾಡಿಲ್ಲ ಎಂದು ಇಡಿ ಅಧಿಕಾರಿಗಳು ದಾಳಿ ಮಾಡಿದ ವಿಚಾರವಾಗಿ ಮಹಮದ್ ಸ್ಪಷ್ಟಪಡಿಸಿದರು.








