ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಭಟ್ಗಳ ಶಹರ ಠಾಣೆಗೆ ಬೆದರಿಕೆ ಸಂದೇಶವನ್ನು ಬಂದಿದ್ದು, ಭಟ್ಕಳ ಪಟ್ಟಣ ಸ್ಪೋಟಿಸುವುದಾಗಿ ಪೊಲೀಸ್ ಠಾಣೆಗೆ ಇಮೇಲ್ ಬೆದರಿಕೆ ಸಂದೇಶ ಬಂದಿದೆ. Kannnannaandk@gmail.com ಎಂಬ ಐಡಿಯಿಂದ ಬೆದರಿಕೆ ಸಂದೇಶ ಬಂದಿದೆ.
ನಿನ್ನೆ ಬೆಳಿಗ್ಗೆ 10:30 ಕ್ಕೆ ಈ ಒಂದು ಮೆಸೇಜು ಬಂದಿದೆ ಪ್ರಮುಖ ಪ್ರದೇಶಗಳಲ್ಲಿ ತಪಾಸನೆ ನಡೆಸಲಾಗಿದ್ದು, ಬಸ್ ನಿಲ್ದಾಣ ರೈಲ್ವೆ ನಿಲ್ದಾಣ, ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ.ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಭಟ್ಕಳ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.