ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 23 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 6 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಲ್ಲಿ ಇದೀಗ ಪೊಲೀಸರು ಮಾದಕ ವಸ್ತುಗಳ ಭರ್ಜರಿ ಬೇಟೆಯಾಡಿದ್ದು, ಅಪಾರ ಪ್ರಮಾಣದ ಹೈಡ್ರೋ ಗಾಂಜಾ MDMA ಕ್ರಿಸ್ಟಲ್, ಆಫೀಮು ಜಪ್ತಿ ಮಾಡಿದ್ದಾರೆ. ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ 4 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಕೆಜಿ.ನಗರ ಠಾಣಾ ವ್ಯಾಪ್ತಿಯಲ್ಲಿ 3.81 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇನ್ನು ಕೊತ್ತನೂರು ವ್ಯಾಪ್ತಿಯಲ್ಲಿ 12.03 ಕೋಟಿ ಮೌಲ್ಯದ MDMA ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ. ನಕಲಿ ಕ್ರಿಪ್ಟೊ ಕರೆನ್ಸಿ ಮೂಲಕ ಡ್ರಗ್ಸ್ ಖರೀದಿಸುತ್ತಿದ್ದರು. ಥೈಲ್ಯಾಂಡ್, ಜರ್ಮನಿಯಿಂದ ಹೈಡ್ರೋ ಗಾಂಜಾ ಖರೀದಿಸುತ್ತಿದ್ದ ಆರೋಪಗಳು ಬೆಂಗಳೂರು ಕೆಜಿ ನಗರದ ಸರ್ಕಾರಿ ಅಂಚೆ ಕಚೇರಿಗೆ ಬರುತ್ತಿತ್ತು.
ಪೋಸ್ಟ್ ಆಫೀಸ್ ನಲ್ಲಿ ಸಂಶಯಸ್ಪದ ಪಾರ್ಸೆಲ್ ಗಳನ್ನ ಪರಿಶೀಲನೆ ಮಾಡಲಾಗಿದೆ. ಸ್ನೀಫರ್ ಶ್ವಾನಗಳ ಮೂಲಕ ಪಾರ್ಸೆಲ್ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಕೂಡ ವಿದೇಶಗಳಿಂದ ಪೋಸ್ಟ್ ಆಫೀಸ್ ಗೆ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ಸದ್ಯ ಎಲ್ಲಾ ಆರೋಪಿಗಳನ್ನ ಅರೆಸ್ಟ್ ಮಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.