Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೇಖೆದಾಟು ಯೋಜನೆ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ವಿಧಾನಸಭೆಯ ನಿರ್ಣಯ ಶ್ಲಾಘಿಸಿದ ನಟ ಕಮಲ್ ಹಾಸನ್ 

​ನೀಟ್ ಮರುಪರೀಕ್ಷೆಗೆ ದೇಶಾದ್ಯಂತ ನಾಳೆ ‘ಮೆಗಾ ಮಾಕ್ ಡ್ರಿಲ್’: 2.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ, 1.5 ಲಕ್ಷ ಸಿಸಿಟಿವಿ ಕಣ್ಗಾವಲು!

BREAKING: ​ನೀಟ್ ಮರುಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಜೂನ್ 21ರ ಪರೀಕ್ಷೆ ತಡೆಗೆ ಕೋರಿದ್ದ ಅರ್ಜಿ ವಜಾ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ದೇಶದಲ್ಲಿ ಎಲ್ಲಾ ರೀತಿಯ `ಆನ್‌ ಲೈನ್ ಹಣದ ಗೇಮ್’ ನಿಷೇಧ : ಪ್ರಚಾರ ಮಾಡಿದರೂ 1 ಕೋಟಿ ರೂ. ದಂಡದ ಜೊತೆಗೆ ಶಿಕ್ಷೆ ಫಿಕ್ಸ್ !
INDIA

BIG NEWS : ದೇಶದಲ್ಲಿ ಎಲ್ಲಾ ರೀತಿಯ `ಆನ್‌ ಲೈನ್ ಹಣದ ಗೇಮ್’ ನಿಷೇಧ : ಪ್ರಚಾರ ಮಾಡಿದರೂ 1 ಕೋಟಿ ರೂ. ದಂಡದ ಜೊತೆಗೆ ಶಿಕ್ಷೆ ಫಿಕ್ಸ್ !

By kannadanewsnow57

ನವದೆಹಲಿ: ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸದಾಗಿ ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿಗೊಳಿಸಲಾಗಿದ್ದು, ಇನ್ನು ಮುಂದೆ ಹಣ ಪಣಕ್ಕಿಟ್ಟು ಆಡುವ ಎಲ್ಲಾ ರೀತಿಯ ಆನ್‌ಲೈನ್ ಆಟಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಲೋಕಸಭೆಯಲ್ಲಿ ಸಂಸದ ರಾವ್ ರಾಜೇಂದ್ರ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಡಾ. ಎಲ್. ಮುರುಗನ್ ಅವರು, ಈ ಹೊಸ ಕಾಯ್ದೆಯು ಕೇವಲ ಆಟಗಳಿಗಷ್ಟೇ ಸೀಮಿತವಾಗಿಲ್ಲ, ಅದರ ಸುತ್ತಮುತ್ತಲಿನ ಸಂಪೂರ್ಣ ಜಾಲಕ್ಕೆ ಬಲೆ ಬೀಸಿದೆ, ಎಲ್ಲಾ ಮಾದರಿಯ ಹಣದ ಆಟಗಳು: ಅದು ಕೌಶಲ್ಯದ ಆಟವಿರಲಿ (Game of Skill) ಅಥವಾ ಅದೃಷ್ಟದ ಆಟವಿರಲಿ (Game of Chance), ಹಣದ ವ್ಯವಹಾರವಿದ್ದರೆ ಅಂತಹ ಆಟಗಳನ್ನು ನಿಷೇಧಿಸಲಾಗಿದೆ.

ಜಾಹೀರಾತು ಮತ್ತು ಪ್ರಚಾರ: ಆನ್‌ಲೈನ್ ಹಣದ ಆಟಗಳ ಪ್ರಚಾರ ಮಾಡುವುದು ಅಥವಾ ಅದಕ್ಕೆ ಸಂಬಂಧಿಸಿದ ಜಾಹೀರಾತು ನೀಡುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕುಗಳು ಅಥವಾ ಯಾವುದೇ ಪಾವತಿ ವ್ಯವಸ್ಥೆಗಳ ಮೂಲಕ ಇಂತಹ ಆಟಗಳಿಗೆ ಹಣ ವರ್ಗಾವಣೆ ಮಾಡುವುದನ್ನೂ ನಿಷೇಧಿಸಲಾಗಿದೆ.

ಶಿಕ್ಷೆ ಮತ್ತು ದಂಡದ ವಿವರಗಳು
ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಸರ್ಕಾರ ಭಾರೀ ದಂಡ ಮತ್ತು ಕಠಿಣ ಶಿಕ್ಷೆಯನ್ನು ನಿಗದಿಪಡಿಸಿದೆ:

ಅಪರಾಧದ ವಿವರ ಮೊದಲ ಬಾರಿ ಶಿಕ್ಷೆ ಎರಡನೇ ಬಾರಿ (ಮರುಕಳಿಸಿದರೆ)
ಆಟ ನೀಡುವುದು/ಹಣಕಾಸು ನೆರವು 3 ವರ್ಷ ಜೈಲು ಅಥವಾ ₹1 ಕೋಟಿ ದಂಡ 5 ವರ್ಷ ಜೈಲು ಮತ್ತು ₹2 ಕೋಟಿ ದಂಡ
ಜಾಹೀರಾತು/ಪ್ರಚಾರ ಮಾಡುವುದು 2 ವರ್ಷ ಜೈಲು ಅಥವಾ ₹50 ಲಕ್ಷ ದಂಡ 3 ವರ್ಷ ಜೈಲು ಮತ್ತು ₹1 ಕೋಟಿ ದಂಡ

ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ ಸ್ಥಾಪನೆ
ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ವ್ಯವಸ್ಥಿತಗೊಳಿಸಲು ಸರ್ಕಾರವು ‘ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ’ ಎಂಬ ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಸ್ಥಾಪಿಸುತ್ತಿದೆ. ಈ ಪ್ರಾಧಿಕಾರವು ಕೆಳಗಿನ ಜವಾಬ್ದಾರಿಗಳನ್ನು ಹೊಂದಿರುತ್ತದೆ:

ಯಾವ ಆಟಗಳನ್ನು ಆಡಬಹುದು ಮತ್ತು ಯಾವುದನ್ನು ಆಡಬಾರದು ಎಂದು ನಿರ್ಧರಿಸುವುದು.

ಇ-ಸ್ಪೋರ್ಟ್ಸ್ ಮತ್ತು ಸಾಮಾಜಿಕ ಆಟಗಳಿಗೆ ಉತ್ತೇಜನ ನೀಡುವುದು.

ಬಳಕೆದಾರರ ದೂರುಗಳನ್ನು ಆಲಿಸಲು ಕುಂದುಕೊರತೆ ನಿವಾರಣಾ ವ್ಯವಸ್ಥೆ ರೂಪಿಸುವುದು.

ಸಾರ್ವಜನಿಕರ ಅಭಿಪ್ರಾಯಕ್ಕೆ ಆಹ್ವಾನ
ಸರ್ಕಾರವು ಈ ಕಾಯ್ದೆಯ ಕರಡು ನಿಯಮಗಳ ಕುರಿತು ಸಾರ್ವಜನಿಕರು ಮತ್ತು ತಜ್ಞರಿಂದ ಸಲಹೆಗಳನ್ನು ಆಹ್ವಾನಿಸಿದೆ. ಅಕ್ಟೋಬರ್ 2, 2025 ರಂದು ಈ ಕರಡು ಪ್ರಕಟವಾಗಿದ್ದು, ಎಲ್ಲರ ಸಹಮತದೊಂದಿಗೆ ಸುರಕ್ಷಿತ ಡಿಜಿಟಲ್ ಪರಿಸರ ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ.

BIG NEWS: All types of 'online money games' banned in the country: Even if you promote it you will be fined Rs. 1 crore and the punishment is fixed!
Share. Facebook Twitter LinkedIn WhatsApp Email

Related Posts

ಮೇಖೆದಾಟು ಯೋಜನೆ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ವಿಧಾನಸಭೆಯ ನಿರ್ಣಯ ಶ್ಲಾಘಿಸಿದ ನಟ ಕಮಲ್ ಹಾಸನ್ 

2 Mins Read

​ನೀಟ್ ಮರುಪರೀಕ್ಷೆಗೆ ದೇಶಾದ್ಯಂತ ನಾಳೆ ‘ಮೆಗಾ ಮಾಕ್ ಡ್ರಿಲ್’: 2.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ, 1.5 ಲಕ್ಷ ಸಿಸಿಟಿವಿ ಕಣ್ಗಾವಲು!

2 Mins Read

BREAKING: ​ನೀಟ್ ಮರುಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಜೂನ್ 21ರ ಪರೀಕ್ಷೆ ತಡೆಗೆ ಕೋರಿದ್ದ ಅರ್ಜಿ ವಜಾ!

2 Mins Read
Recent News

ಮೇಖೆದಾಟು ಯೋಜನೆ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ವಿಧಾನಸಭೆಯ ನಿರ್ಣಯ ಶ್ಲಾಘಿಸಿದ ನಟ ಕಮಲ್ ಹಾಸನ್ 

​ನೀಟ್ ಮರುಪರೀಕ್ಷೆಗೆ ದೇಶಾದ್ಯಂತ ನಾಳೆ ‘ಮೆಗಾ ಮಾಕ್ ಡ್ರಿಲ್’: 2.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ, 1.5 ಲಕ್ಷ ಸಿಸಿಟಿವಿ ಕಣ್ಗಾವಲು!

BREAKING: ​ನೀಟ್ ಮರುಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಜೂನ್ 21ರ ಪರೀಕ್ಷೆ ತಡೆಗೆ ಕೋರಿದ್ದ ಅರ್ಜಿ ವಜಾ!

​ಲಿಯೋನೆಲ್ ಮೆಸ್ಸಿ ತಂದೆ ನಿಧನರಾಗಿದ್ದಾರೆಂದು ತಪ್ಪು ವರದಿ: ಲೈವ್ ಶೋನಲ್ಲೇ ಸುಳ್ಳು ಸುದ್ದಿ ಹೇಳಿ ರಾಜೀನಾಮೆ ನೀಡಿದ ಅರ್ಜೆಂಟೀನಾದ ಪ್ರಸಿದ್ಧ ಟಿವಿ ನಿರೂಪಕಿ!

State News
KARNATAKA

ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಬಸ್ ಪ್ರಯಾಣದ ದರ ಹೆಚ್ಚಳಕ್ಕೆ ಸಾರಿಗೆ ನಿಗಮಗಳ ಪ್ರಸ್ತಾವನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆರ್ಥಿಕ ಹೊರೆಯ…

ಬಿಡದಿ ಭೂಸ್ವಾಧೀನಕ್ಕೆ ಹೆಚ್.ಎಂ.ರಮೇಶಗೌಡ ನೇತೃತ್ವದಲ್ಲಿ CSಗೆ ದೂರು ಸಲ್ಲಿಸಿದ ಜೆಡಿಎಸ್ ನಿಯೋಗ

ಮದ್ದೂರು ತಾಲೂಕಿಗೆ 5 ಕೆಪಿಎಸ್ ಶಾಲೆಗಳು ಮಂಜೂರು: ಮದ್ದೂರು ಶಾಸಕ ಕೆ.ಎಂ.ಉದಯ್

ಶೀಘ್ರದಲ್ಲೇ ‘ಕೈ’ ಹಿಡಿಯಲಿದ್ದಾರೆ ‘ಬಿಜೆಪಿ ಶಾಸಕ’ರು; ಮದ್ದೂರು ಶಾಸಕ ಕೆ.ಎಂ.ಉದಯ್ ಸ್ಪೋಟಕ ಭವಿಷ್ಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : [email protected]

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

[email protected]

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.