ದಾವಣಗೆರೆ : ದಾವಣಗೆರೆಯಲ್ಲಿ ಘೋರವಾದ ದುರಂತ ನಡೆದಿದ್ದು, ಯುವಕನೊಬ್ಬ ಕುಟುಂಬದ ಸಮೇತ ಉಕ್ಕಡಗಾತ್ರಿ ಕರಿಬಸವೇಶ್ವರ ರಥೋತ್ಸವಕ್ಕೆ ಬಂದಿದ್ದ. ಈ ವೇಳೆ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಹಿರೇಕೆರೂರು ತಾಲೂಕಿನ ಹದರಿಹಳ್ಳಿ ಗ್ರಾಮದ ನಾಗರಾಜ್ (26) ಎಂದು ತಿಳಿದುಬಂದಿದೆ. ಉಕ್ಕಡಗಾತ್ರಿ ಕರಿಬಸವೇಶ್ವರ ರಥೋತ್ಸವಕ್ಕೆ ಕುಟುಂಬದ ಸಮೇತ ಬಂದಾಗ ತುಂಗಭದ್ರಾ ನದಿಯಲ್ಲಿ ಸ್ನಾನಕೆಂದು ನಾಗರಾಜ್ ನದಿಗೆ ಇಳಿದಿದ್ದಾನೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ನಾಗರಾಜ್ ಸಾವನಪ್ಪಿದ್ದು, ಘಟನೆ ಕುರಿತು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.