ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನಗೆ ರಾಜಾತಿಥ್ಯ ನೀಡಿದ ಪ್ರಕರಣದ ಬಳಿಕ ಸೆಂಟ್ರಲ್ ಜೈಲ್ನಲ್ಲಿ 26 ಮೊಬೈಲ್ಗಳು ಪತ್ತೆಯಾಗಿದ್ದವು. ಅವುಗಳ ಜಾಡು ಹಿಡಿದ ಹೊರಟ ಪೊಲೀಸರು ಇದೀಗ ಕೊನೆಗೂ ಜೈಲ್ನಲ್ಲಿ ಮೊಬೈಲ್ ರವಾನೆ ಮಾಡುತ್ತಿದ್ದ ಖೈದಿಯನ್ನು ಲಾಕ್ ಮಾಡಿದ್ದಾರೆ.
ಹೌದು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ಗೆ ರಾಜತಿಥ್ಯ ಕೇಸ್ಗೆ ಸಂಬಂಧಿಸಿದಂತೆ ಸೆಂಟ್ರಲ್ ಜೈಲ್ನಲ್ಲಿ ಮೊಬೈಲ್ ರವಾನೆ ಮಾಡುತ್ತಿದ್ದ ಕಿಂಗ್ ಪಿನ್ನನ್ನು ಪೊಲೀಸರು ಕೊನೆಗೂ ಲಾಕ್ ಮಾಡಿದ್ದಾರೆ. ಇತ್ತೀಚೆಗೆ ಪತ್ತೆಯಾದ 26 ಮೊಬೈಲ್ಗಳ ಜಾಡು ಹಿಡಿದ ಖಾಕಿ, ಕೆಜಿಎಫ್ ಮೂಲದ ವಿಜಯ್ ಎಂಬಾತನನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ದಾಳಿ ವೇಳೆ 1.3 ಲಕ್ಷ ಮೌಲ್ಯದ ಸ್ಯಾಮ್‌ಸಂಗ್ ಫೋನ್‌ಗಳು, 7 ಎಲೆಕ್ಟ್ರಿಕ್ ಸ್ಟವ್‌ಗಳು, 5 ಚಾಕುಗಳು, 3 ಮೊಬೈಲ್ ಫೋನ್ ಚಾರ್ಜರ್‌ಗಳು, 2 ಪೆನ್ ಡ್ರೈವ್‌ಗಳು, 36,000 ರೂಪಾಯಿ ನಗದು, ಸಿಗರೇಟ್, ಬೀಡಿ ಮತ್ತು ಬೆಂಕಿಕಡ್ಡಿ ಬಾಕ್ಸ್‌ಗಳು ಸೇರಿದಂತೆ 15 ಮೊಬೈಲ್ ಫೋನ್‌ಗಳು ಕೂಡ ಪತ್ತೆಯಾಗಿದ್ದವು. ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿದಾಗ ಮತ್ತೆ ಕೆಲ ಮೊಬೈಲ್ಗಳು ಪತ್ತೆ ಆಗಿದ್ದವು.
ಇದೀಗ ಮರ್ಡರ್ ಕೇಸ್ನಲ್ಲಿ ಜೈಲಲ್ಲಿರುವ ಖೈದಿ ವಿಜಯ್, ಜೈಲಾಧಿಕಾರಿಗಳ ಸಹಾಯದಿಂದಲೇ ಮೊಬೈಲ್ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್ಗಳು ಸಾವಿರಾರು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಕೆಲ ಜೈಲು ಸಿಬ್ಬಂದಿಯೇ ಮೊಬೈಲ್ಗಳನ್ನ ಒಳಗೆ ರವಾನೆ ಮಾಡುತ್ತಿದ್ದ ಬಗ್ಗೆ ಕೂಡ ಮಾಹಿತಿ ಇದೆ. ಇನ್ನು ನಿನ್ನೆ ಮತ್ತೆ ಜೈಲಾಧಿಕಾರಿಗಳಿಂದ ಜೈಲಿನ ಒಳಗೆ ರೇಡ್ ಮಾಡಿ ಪರಿಶೀಲನೆ ಮಾಡಲಾಗಿದೆ.