ಶಿವಮೊಗ್ಗ : ನಗರದ ಸೈಬರ್ ಕ್ರೈಂ ಪೊಲೀಸರು ಬಹುದೊಡ್ಡ ಪ್ರಕರಣ ಭೇದಿಸಿದ್ದು, ಹವಾಲಾ ಹಣ ಸೇರಿ ಇನ್ನಿತರ ಅಕ್ರಮ ಚಟುವಟಿಕೆಗಳಿಗಾಗಿ ಬಳಕೆಯಾ ಗುತ್ತಿದ್ದ 19 ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚಿದ್ದಾರೆ. ಇದುವರೆಗೆ ಈ ಖಾತೆಯಲ್ಲಿ 55.43 ಕೋಟಿ ರೂ.ಗೂ ಹೆಚ್ಚು ವಂಚಿಸಿರುವುದು ಗಮನಕ್ಕೆ ಬಂದಿದೆ. ಶರತ್ ಅಲಿಯಾಸ್ ಗುಂಡ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈತ ಬೇರೆಯವರ 19 ಖಾತೆಗಳನ್ನು ಬಳಸಿ ಐದು ತಿಂಗಳಲ್ಲಿ 55.43 ಕೋಟಿ ರೂ. ವಂಚನೆ ಮಾಡಿದ್ದು, ಅದಕ್ಕಾಗಿ 11.48 ಕೋಟಿ ರೂ.ಗೂ ಹೆಚ್ಚು ಕಮಿಷನ್ ಪಡೆದಿದ್ದಾನೆ. ಈ ಖಾತೆಗಳ ಮೇಲೆ 96 ಪ್ರಕರಣಗಳು ದಾಖಲಾಗಿವೆ. ಇಂಡಿಯನ್ ಓವರ್ಸಿಸ್ ಬ್ಯಾಂಕ್‌ನ ವಿನೋಬನಗರ ಶಾಖೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಗಣೇಶ್ ಟಿ ಅಂಗಡಿ ಹೆಸರಿನ ಖಾತೆ ತೆರೆದಿದ್ದ.
ಅದರ ಪಾಸ್ ಬುಕ್, ಎಟಿಎಂ ಕಾರ್ಡ್ ಮತ್ತು ಖಾತೆಗೆ ಲಿಂಕ್ ಮಾಡಿಸಿರುವ ಮೊಬೈಲ್ ಸಂಖ್ಯೆಯನ್ನು ನೀಡಿದರೆ 15 ದಿನಗಳಿಗೊಮ್ಮ ಕಮಿಷನ್ ನೀಡುವುದಾಗಿ ಶರತ್ ನಂಬಿಸಿದ್ದ. ಈ ಕುರಿತು ವಿನೋಬನಗರ ಠಾಣೆಯಲ್ಲಿ ದಾಖಲಾದ ದೂರಿನ ತನಿಖೆ ವೇಳೆ ಪೊಲೀ ಸರಿಗೆ ಬಹುಕೋಟಿ ವಹಿ ವಾಟು ನಡೆದಿರುವುದು ಗಮನಕ್ಕೆ ಬಂದಿದೆ.
ಶಿವಮೊಗ್ಗ, ದಾವಣಗೆರೆ, ತುಮಕೂರು ಮೂಲದವರ ಖಾತೆಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಮೂಲಕ ವಂಚನೆ ಮಾಡಿದ್ದಾನೆ. ಆ 19 ಖಾತೆಗಳ ಮೇಲೆ ದೇಶಾದ್ಯಂತ ಒಟ್ಟು 96 ಪ್ರಕರಣಗಳು ದಾಖಲಾಗಿವೆ. ಶರತ್ ಮನೆಯಲ್ಲಿದ್ದ 18 ಪಾಸ್ ಬುಕ್, 7 ಚೆಕ್ ಬುಕ್, 25 ಎಟಿಎಂ ಕಾರ್ಡ್, 2 ಮೊಬೈಲ್ ಮತ್ತು 2 ಕ್ಯೂಆರ್ ಕೋಡ್ ಸಾನರ್‌ಗಳನ್ನು ವಶಕೆ ಪಡೆಯಲಾಗಿದೆ.








