ಬೆಂಗಳೂರು : ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತಾರ ಸೀಕ್ವೆಲ್’ನ ಸಿನಿಮಾವನ್ನು ನೋಡಿದ ನಟ ರಣವೀರ್ ಸಿಂಗ್ ಅವರು ಈ ಸಿನಿಮಾದಲ್ಲಿರುವ ಚಾವುಂಡಿ ದೈವವನ್ನು ಫೀಮೇಲ್ ಘೋಸ್ಟ್ ಎಂದು ಕರೆದು ಅದರ ನಟನೆಯ ಅನುಕರಣೆ ಮಾಡಿದ್ದರು. ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ದ ದೂರು ದಾಖಲಾಗಿದೆ.
ಬಾಲಿವುಡ್ ಸ್ಟಾರ್ ನಟ ದೀಪಿಕಾ ಪಡುಕೋಣೆ ಪ, ಸ್ಟಾರ್ ನಟ ರಣವೀರ್ ಸಿಂಗ್ ವಿರುದ್ಧ ಇದೀಗ ಕರ್ನಾಟಕದಲ್ಲಿ, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಣವೀರ್ ಸಿಂಗ್ ಅವರು ಕಾಂತಾರ ದೈವವನ್ನು ‘ದೆವ್ವ’ ಎಣಬ ಪದ ಉಪಯೋಗಿಸಿ ಕರೆದಿದ್ದು ದೊಡ್ಡ ವಿವಾದವಾಗುತ್ತಿದೆ.28 ನವೆಂಬರ್ 2025ರಂದು, ಗೋವಾದ ಇಂಟರ್ ನ್ಯಾಷನಲ್ ಫೀಲಂ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಈ ಘಟನೆ ನಡೆದಿತ್ತು.
ಕಾಂತಾರ ಸಿನಿಮಾದ ಉಳ್ಳಾಳ್ತಿ ದೈವದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನಟ ರಣವೀರ್ ಸಿಂಗ್ ವಿರುದ್ಧ ಇದೀಗ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತಾರ ಸೀಕ್ವೆಲ್‌ನ ಸಿನಿಮಾವನ್ನು ನೋಡಿದ ನಟ ರಣವೀರ್ ಸಿಂಗ್ ಅವರು ಈ ಸಿನಿಮಾದಲ್ಲಿರುವ ‘ಚಾವುಂಡಿ ದೈವ’ವನ್ನು ಫೀಮೇಲ್ ಘೋಸ್ಟ್ ಎಂದು ಕರೆದು ಅದರ ನಟನೆಯ ಅನುಕರಣೆ ಮಾಡಿದ್ದರು.








