ಬೆಳಗಾವಿ : ವಕ್ಫ್ ಆಸ್ತಿಯ ಕಬಳಿಕೆವಿ ಚಾರವಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ 150 ಕೋಟಿ ರೂಪಾಯಿ ಆಮೀಷವಡ್ಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯ ಸುವರ್ಣ ಸಹೋದರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಮಾಣಿಪಾಡ್ಡಿ ಈ ಹಿಂದೆ ಹೇಳಿಕೆ ನೀಡಿದಕ್ಕೆ ತಾನೆ ನಾವು ರಿಯಾಕ್ಟ್ ಮಾಡಿದ್ದು ನಾವು ರಿಯಾಕ್ಟ್ ಮಾಡಿದ್ದು ಸರಿ ಇದೆ ಎಂದು ಸಮರ್ಥಿಸಿಕೊಂಡರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಣಪ್ಪಾಡಿ ಪ್ರಕರಣ ಸಿಬಿಐಗೆ ಕೊಡುವ ಬಗ್ಗೆ ಚರ್ಚೆಯಾಗಿದೆ. ಅನ್ವರ್ ಮಾಣಪಾಡಿ ಈ ಹಿಂದೆ ವಿಜಯೇಂದ್ರ ಆಮಿಷ ಒದ್ದಿದ್ದರು ಎಂದು ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ. ಯಾವುದು ಸರಿ ಯಾವುದು ತಪ್ಪು ನೋಡಬೇಕು. ಮೊದಲು ಅವರು ಹೇಳಿದ ಮೇಲೆ ತಾನೆ ನಾವು ರಿಯಾಕ್ಟ್ ಮಾಡಿದ್ದೇವೆ?
ಈಗ ಇಲ್ಲ ಅಂದ್ರೆ ಏನು ಮಾಡಬೇಕು ನೀವೇ ಹೇಳಿ. ನಮ್ಮ ಪ್ರಕಾರ ನಾವು ರಿಯಾಕ್ ಮಾಡಿದ್ದು ಸರಿ ಇದೆ. 150 ಕೋಟಿ ಆಫರ್ ಮಾಡಿದ್ರು ಅಂತ ಅವರೇ ಹೇಳಿದ್ದಾರೆ. ಪ್ರೆಸ್ ಮೀಟ್ ಮಾಡಿ ಅವರೇ ಹೇಳಿದ್ದು ವಿಡಿಯೋ ಕೂಡ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.