ಚಿಕ್ಕಬಳ್ಳಾಪುರ : ಹಣಕಾಸಿನ ವಿಚಾರವಾಗಿ ಸ್ನೇಹಿತರ ನಡುವೆ ಗಲಾಟೆ ನಡೆದು, ಸ್ನೇಹಿತನೊಬ್ಬ ತನ್ನ ಇನ್ನೊಬ್ಬ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಆರ್‌ಟಿಓ ಕಚೇರಿ ಬಳಿ ಒಂದು ಕೃತ್ಯ ನಡೆದಿದೆ.
ಬೆಂಗಳೂರು ಮೂಲದ ಆನಂದ್ ಎನ್ನುವವನಿಗೆ ಸುರೇಶ ಎನ್ನುವ ಸ್ನೇಹಿತ ಚಾಕು ಇರಿದು ಪರಾರಿಯಾಗಿರುವ ಘಟನೆ ನಡೆದಿದೆ. ಗಾಯಾಳು ಆನಂದನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೇವರಬಿಸನಹಳ್ಳಿಯ ಆದರ್ಶ ಟ್ರೀ ಫಾರಂನಲ್ಲಿ ಇವರಿಬ್ಬರು ಚಾಲಕರಾಗಿದ್ದರು.
ಚಿಕ್ಕಬಳ್ಳಾಪುರ ತಾಲೂಕಿನ ಸಪ್ಪಂಗಿಹಳ್ಳಿಗೆ ಆನಂದ ಮತ್ತು ಸುರೇಶ್ ಬಂದಿದ್ದರು. ಈ ವೇಳೆ ಚಂದ್ರು ಮನೆಗೆ ತೆರಳುತ್ತಿದ್ದಾಗ ಆನಂದಗೆ ಸುರೇಶ ಚಾಕು ಇರದಿದ್ದಾನೆ ಹಣಕಾಸು ವಿಚಾರವಾಗಿ ಜಗಳವಾಗಿ ಚಾಕು ಇರಿದಿರುವ ಶಂಕೆ ಇದೀಗ ವ್ಯಕ್ತವಾಗಿದೆ. ಘಟನೆ ಕುರಿತಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.