ಮೈಸೂರು : ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ. ಯಾಕೆ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ ಅಂದರೆ, ಸ್ವತಂತ್ರ ಬಂದು 78 ವರ್ಷಗಳಾದರೂ ಕೂಡ ಅಸಮಾನತೆ ಇದೆ ತಾರತಮ್ಯ ಇದೆ ಇದೆಲ್ಲವನ್ನು ಹೋಗಲಾಡಿಸಲು ನಾವು ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಮುಂದುವರೆಸಲಿಕ್ಕೆ ಆಗಲ್ಲ ಅಂತ ಹೇಳಿದರು. ಇಲ್ಲಿವರೆಗೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ರಾಜ್ಯ ಏನಾದರೂ ದಿವಾಳಿ ಆಗಿದೆಯಾ ? ಪ್ರತಿವರ್ಷ 52 ರಿಂದ 56,000 ಕೋಟಿ ರೂಪಾಯಿ ಇದಕ್ಕೆ ಖರ್ಚು ಮಾಡುತ್ತಿದ್ದೇವೆ. ಪ್ರತಿಯೊಂದು ಬಡವರ ಮನೆಗೆ ದೀನ ದಲಿತರ ಮನೆಗೆ ಬಡವರ ಮನೆಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಇವತ್ತು ಕೊಂಡುಕೊಳ್ಳುವಂಥ ಶಕ್ತಿ ಜಾಸ್ತಿಯಾಗಿದೆ.
ಶಕ್ತಿ ಯೋಜನೆಯ ಮೂಲಕ ಯಾವ ಹೆಣ್ಣು ಮಕ್ಕಳು ಕೂಡ ಬಸ್ ಚಾರ್ಜ್ ಕೊಡುವ ಹಾಗಿಲ್ಲ ಸುಮಾರು 500 ಕೋಟಿಗೂ ಹೆಚ್ಚು ಜನ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದು ಯಾವ ಕಾರಣಕ್ಕೂ ನಿಲ್ಲಲ್ಲ. ಯಾರು ವಿರೋಧ ಮಾಡಿದ್ದಾರೋ ಅವರೇ ಈಗ ಗ್ಯಾರೆಂಟಿ ಯೋಜನೆಗಳನ್ನು ಕಾಪಿ ಮಾಡೋಕ್ಕೆ ಶುರು ಮಾಡಿದ್ದಾರೆ. ವಿರೋಧ ಮಾಡುವುದು ಒಂದು ಕಾಲವಾದರೆ ಕಾಪಿ ಮಾಡೋದು ಇನ್ನೊಂದು ಕಾಲವಾಗಿದೆ. ಕರ್ನಾಟಕ ಗ್ಯಾರಂಟಿ ಯೋಜನೆಗಳನ್ನು ಮಾಡಿದ ಮೇಲೆ ಕರ್ನಾಟಕ ತಲಾ ಆದಾಯದಲ್ಲಿ 2, ಲಕ್ಷ 4 ಸಾವಿರ ಆಗಿದೆ. ಕರ್ನಾಟಕ ತಲಾ ಆದಾಯದಲ್ಲಿ ನಂಬರ್ 1 ರಾಜ್ಯವಾಗಿದೆ ಎಂದರು.
5 ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಲಾಭಕ್ಕೋಸ್ಕರ ಮಾಡುತ್ತಿಲ್ಲ. ರಾಜಕೀಯ ಲಾಭಕ್ಕೋಸ್ಕರ ಮಾಡುತ್ತಿದ್ದರೆ ಎಲ್ಲಾ ಧರ್ಮದವರಿಗೆ ಎಲ್ಲಾ ಜಾತಿಯವರಿಗೆ ಎಲ್ಲಾ ಪಕ್ಷದವರಿಗೆ ಮಾಡಕ್ಕೆ ಬರುತ್ತಿರಲಿಲ್ಲ. ಜೆಡಿಎಸ್ ಪಕ್ಷ ಹಾಗೂ ಬಿಜೆಪಿ ಪಕ್ಷದವರು ಗ್ಯಾರಂಟಿ ಯೋಜನೆ ಪಡೆದುಕೊಳ್ಳಲ್ವಾ? ಬಡವರು, ಎಲ್ಲಾ ಜಾತಿಯಲ್ಲೂ ಇದಾರೆ. ಎಲ್ಲ ಧರ್ಮದಲ್ಲೂ ಇದಾರೆ.ಎಲ್ಲ ಪಕ್ಷಗಳಲ್ಲೂ ಇದ್ದಾರೆ.
ಬಡವರಿಗೆ ಆರ್ಥಿಕವಾಗಿ ಶಕ್ತಿ ಕೊಡಬೇಕು ಜಾತಿ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರಿಗೆ ದೌರ್ಜನ್ಯ ಅಸಮಾನತೆ ಮುಂದುವರೆಯುತ್ತದೆ. ಅಸಮಾನತೆ,ದೌರ್ಜನ್ಯ ಹೋಗಬೇಕಾದರೆ ಎಲ್ಲರೂ ಮುಖ್ಯವಾಹಿನಿಗೆ ಬರಬೇಕಾದರೆ, ಸಮಾನತೆ ಬಂದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗುತ್ತದೆ ಇಲ್ಲವಾದರೆ ಸಾಧ್ಯ ಆಗಲ್ಲ. ಇದನ್ನೇ ಬುದ್ಧ ಬಸವಣ್ಣ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ಹೇಳಿದ್ದು.
ಕುವೆಂಪು ಅವರು ಹೇಳುತ್ತಾರೆ ಎಲ್ಲಾ ದೇವಸ್ಥಾನಗಳನ್ನ ಚರ್ಚ್ ಗಳನ್ನ ಮಸೀದಿಗಳನ್ನು ಬಿಟ್ಟು ಬರ್ರಿ ಮನುಷ್ಯರಾಗಿ ಅಂತ ಹೇಳಿದರು. ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಅಂದರು ನಾವು ಸಮಾಜವನ್ನು ಒಡೆಯುವಂತಹ ಕೆಲಸ ಮಾಡಬೇಕಾ? ಧರ್ಮದ ಆಧಾರದ ಮೇಲೆ ಜಾತಿಯ ಆಧಾರದ ಮೇಲೆ ಸಮಾಜ ಹೊಡೆಯುವ ಕೆಲಸ ಮಾಡಬೇಕಾ? ಹಾಗೆ ಮಾಡಬಾರದು ನಮ್ಮ ಸಂವಿಧಾನದಲ್ಲಿ ಆ ರೀತಿ ಇಲ್ಲ. ಸಂವಿಧಾನದಲ್ಲಿ ಎಲ್ಲರೂ ಮನುಷ್ಯರಾಗಿ ಬಾಳಿ ಸಮಾಸವನ್ನು ಕಟ್ಟಿ ಎಲ್ಲರೂ ಭಾತೃತ್ವದಿಂದ ಬಾಳುವಾ ಭಾವನೆ ಬೆಳೆಸಿಕೊಳ್ಳಿ ಎಂದು ಸಂದೇಶ ಸಾರುತ್ತದೆ. ಹಾಗಾಗಿ ಇದನ್ನು ನಾಡಹಬ್ಬ ಜನರ ಹಬ್ಬ ಎಂದು ಕರೆಯಲಾಗುತ್ತದೆ. ಇದು ಒಂದು ಧರ್ಮದ ಹಬ್ಬದ ಒಂದು ಜಾತಿಯ ಹಬ್ಬ ಅಲ್ಲ ಎಲ್ಲ ಧರ್ಮದ ಎಲ್ಲಾ ಜಾತಿಗಳ ಹಬ್ಬ. ಹಾಗಾಗಿ ಇದನ್ನು ವಿಶ್ವವಿಖ್ಯಾತ ದಸರಾ ಅಂತ ಕರೆಯಲಾಗುತ್ತದೆ ಎಂದರು.