ಶಿವಮೊಗ್ಗ : ಶಿವಮೊಗ್ಗದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಹಲ್ಲೆ ನಡೆದಿದ್ದು, ಹಳೆ ದ್ವೇಷ ಹಿನ್ನೆಲೆ ಹಾಗೂ ಅಭಿವೃದ್ಧಿ ಕಂಡು ಹೊಟ್ಟೆ ಉರಿಗೆ ಈ ಒಂದು ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಶಿವಮೊಗ್ಗ ಹೊಸನಗರದ ನಿಟ್ಟೂರಿನಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹಲ್ಲೆ ಮಾಡುವುದರ ದೃಶ್ಯ ಇದೀಗ ಸಿ ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ದೇವರಾಜ ಎನ್ನುವವರಿಂದ ನಾಗೋಡಿ ವಿಶ್ವನಾಥ್ ಮೇಲೆ ಹಲ್ಲೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯ ನಾಗೋಡಿ ವಿಶ್ವನಾಥ್ ಗೆ ಇದೀಗ ಗಂಭೀರವಾದ ಗಾಯಗಳಾಗಿದ್ದು, ಗಾಯಾಳುವಿಗೆ ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.