ನವದೆಹಲಿ : ಡಿಕೆ ಶಿವಕುಮಾರ್ ಜೊತೆ ಸೇರಿ ಕಾಂಗ್ರೆಸ್ ಸರ್ಕಾರ ಉಳಿಸುವ ಯತ್ನದಲ್ಲಿ ಬಿ ವೈ ವಿಜಯೇಂದ್ರ ತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರವಾದ ಆರೋಪ ಮಾಡಿದರು.
ದೆಹಲಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ, ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಮಾತನಾಡದಿರಲು ಕಾರಣ ಬಿವೈ ವಿಜಯೇಂದ್ರ. ಕಾಂಗ್ರೆಸ್ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿಜೇಂದ್ರ ಮನೆಯಲ್ಲಿ ಭಿನ್ನರ ಸಭೆ ಮಾಡಿದ್ದಾರೆ. ಅವರ ಮನೆಯಲ್ಲಿ ಸಭೆ ನಡೆಸಿದ್ದಾರೆ ಹಾಗಾಗಿ ಬಿವೈ ವಿಜಯೇಂದ್ರಗು ನೋಟಿಸ್ ಕೊಡಬೇಕು ಎಂದು ಶಾಸಕ ಯತ್ನಾಳ್ ವಿಜಯೇಂದ್ರ ವಿರುದ್ಧ ಸರಣಿ ಆರೋಪ ಮಾಡಿದ್ದಾರೆ.
ಬಿಜೆಪಿ ಶಿಸ್ತು ಸಮಿತಿ ನನಗೆ ಉತ್ತರ ನೀಡುವಂತೆ ನೋಟಿಸ್ ನೀಡಿದಾಗ, ಆ ಒಂದು ನೋಟಿಸ್ ಗೆ ನಾನು ಉತ್ತರ ನೀಡುವ ಸಮಯದಲ್ಲಿ ಹೇಳಿದ್ದೆ. ಬಿವೈ ವಿಜಯೇಂದ್ರಗೂ ಸಹ ನೋಟಿಸ್ ನೀಡಬೇಕು ಎಂದು ಹೇಳಿದ್ದೆ. ನನಗಷ್ಟೇ ನೋಟಿಸ್ ಕೊಟ್ಟು ಅವರು ಸಾಚ ಅಂತ ಆಗಲ್ವಾ? ವಿಜೇತರಿಗೆ ನೋಟಿಸ್ ಕೊಡುತ್ತಿದ್ದರೆ ಸಾಚಾ ಅಂತ ಆಗಲ್ವಾ? ಎಂದು ಆರೋಪಿಸಿದರು.