ಬೆಂಗಳೂರು : ಆತ ಬೆಂಗಳೂರಿನ ಪ್ರತಿಷ್ಠಿತ ಉದ್ಯಮಿ, ಮನೆಯಲ್ಲಿ ಕುಟುಂಬದ ಸಮೇತ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳಕ್ಕೆ ತೆರಳಿದ್ದಾನೆ. ಆದರೆ ಇತ್ತ ಮನೆಯಲ್ಲಿ ಕೆಲಸಕ್ಕೆಂದು ಇದ್ದ ನೇಪಾಳಿ ದಂಪತಿಗಳಿಬ್ಬರು ಒಂದು ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಬೆಂಗಳೂರಿನಲ್ಲಿ ಉದ್ಯಮಿ ಪ್ರಶಾಂತ್ ಮನೆಯಲ್ಲಿ ಈ ಒಂದು ದರೋಡೆ ನಡೆದಿದ್ದು, ಪ್ರಶಾಂತವರು ಕುಟುಂಬದ ಸಮೇತ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಕೆಲಸಕ್ಕೆ ಇದ್ದಂತಹ ನೇಪಾಳ ಮೂಲದ ದಂಪತಿಗಳಿಬ್ಬರು 2 ಕೆಜಿ ಚಿನ್ನ ಹಾಗೂ 50 ಕೆಜಿ ಬೆಳ್ಳಿ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಫೆಬ್ರವರಿ 22ರಂದು ಅವರು ಪ್ರಯಾಗ್ ರಾಜ್ ಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಎರಡು ಕೆಜಿ ಚಿನ್ನ, 50 ಕೆಜಿ ಬೆಳ್ಳಿಯನ್ನು ಕದ್ದು ನೇಪಾಳ ಮೂಲದ ದಂಪತಿ ಪರಾರಿಯಾಗಿದ್ದಾರೆ. ಪ್ರಶಾಂತ್ ಅವರ ದೂರು ಆಧರಿಸಿ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೂಡಲೇ ಅಲರ್ಟ್ ಆದ ಪೊಲೀಸರು ನೇಪಾಳಿ ದಂಪತಿಗಳು ಬಸ್ ಸ್ಟ್ಯಾಂಡ್ ರೈಲ್ವೆ ಸ್ಟೇಷನ್ ಎಲ್ಲೆಲ್ಲಿ ಹೋಗಿದ್ದಾರೆ ಅಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ.
ಎರಡು ದಿನದಲ್ಲಿ 450ಕ್ಕೂ ಅಧಿಕ ಹೆಚ್ಚು ಸಿಸಿ ಕ್ಯಾಮೆರಾ ಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಬಸ್ ನಿಲ್ದಾಣಕ್ಕೆ ಬಂದಿರುವುದು ಬಯಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ದಂಪತಿ ಎಲ್ಲಿಗೆ ಹೋಗಿದ್ದಾರೆ ಎನ್ನುವುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ದೂರು ದಾಖಲಾಗಿ ಎರಡು ದಿನ ಕಳೆದರೂ ಇನ್ನೂ ದಂಪತಿ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.