ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ನಡೆಯುತ್ತಿರುವ ಸಂದರ್ಭದಲ್ಲಿ ಇದರ ಲಾಭವನ್ನು ಪಡೆದ ಭಯೋತ್ಪಾದಕರು ಜಮ್ಮು ಕಾಶ್ಮೀರದ ಸಾಂಬಾದಲ್ಲಿ ಭಾರತದ ಗಡಿ ಪ್ರವೇಶಕ್ಕೆ ಯತ್ನಿಸಿದ್ದಾರೆ. ಈ ವೇಳೆ ಗಡಿ ಭದ್ರತಾ ಪಡೆಗಳು ಭಾರತ ಪ್ರವೇಶಿಸಲು ಯತ್ನಿಸಿದ 7 ಉಗ್ರರನ್ನು ಹತ್ಯೆಗೈದಿದ್ದಾರೆ. ಇದೀಗ ಈ ಒಂದು ವಿಡಿಯೋ ಭಾರತೀಯ ಸೇನೆ ರಿಲೀಸ್ ಮಾಡಿದೆ.
ಜಮ್ಮು ಗಡಿನಾಡಿನ ಬಿಎಸ್‌ಎಫ್‌ನ ಸಾಂಬಾ ಸೆಕ್ಟರ್‌ನಲ್ಲಿ, ಮೇ 8 ಮತ್ತು 9, 2025 ರ ಮಧ್ಯರಾತ್ರಿ, ಭಯೋತ್ಪಾದಕರ ದೊಡ್ಡ ಗುಂಪಿನಿಂದ ಒಳನುಸುಳುವಿಕೆ ಪ್ರಯತ್ನವನ್ನು ನಡೆಸಲಾಗಿದ್ದು, ಇದನ್ನು ಕಣ್ಗಾವಲು ಗ್ರಿಡ್ ಪತ್ತೆ ಮಾಡಿದೆ. ಈ ಒಳನುಸುಳುವಿಕೆ ಪ್ರಯತ್ನಕ್ಕೆ ಪಾಕ್ ರೇಂಜರ್ಸ್ ಪೋಸ್ಟ್ ಧಂಧರ್‌ನಿಂದ ಗುಂಡಿನ ದಾಳಿ ನಡೆಸಿತು.
ಉಗ್ರರು ಭಾರತಕ್ಕೆ ಅಕ್ರಮವಾಗಿ ಒಳ ನುಸುಳಲು ಯತ್ನಿಸುತ್ತಿರುವುದು ಬಿಎಸ್‌ಎಫ್ ಯೋಧರಿಗೆ ತಿಳಿದುಬಂದಿದೆ. ತಕ್ಷಣ BSF ಯೋಧರು ಒಳನುಸುಳುವಿಕೆ ಪ್ರಯತ್ನವನ್ನು ತಡೆದಿದ್ದಾರೆ. ಈ ವೇಳೆ BSF ಯೋಧರು ಕನಿಷ್ಠ 7 ಭಯೋತ್ಪಾದಕರನ್ನು ಕೊಂದು ಹತ್ಯೆಗೈದಿದ್ದಾರೆ. ಅಲ್ಲದೇ ಪಾಕ್ ಪೋಸ್ಟ್ ಧಂಧರ್‌ಗೆ ವ್ಯಾಪಕ ಹಾನಿಯನ್ನುಂಟುಮಾಡಿದವು.
In Samba Sector of Jammu Frontier BSF, in the intervening night of 8th and 9th of May 2025, an infiltration attempt by a big group of terrorists has been tried, which was detected by surveillance grid.
This infiltration bid was supported by fire from Pak Rangers post Dhandhar.… pic.twitter.com/L9FqSPJIyj
— DD News (@DDNewslive) May 9, 2025