ಪಂಜಾಬ್ : ಪಹಲ್ಗಾಂ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ಸರ್ಕಾರ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಆದೇಶ ನೀಡಿತ್ತು. ಬಳಿಕ ಪಾಕಿಸ್ತಾನ್ ಪ್ರಜೆಗಳು ಭಾರತ ಬಿಟ್ಟು ತೊಲಗಿದ್ದರು. ಇದೀಗ ಪಂಜಾಬ್ ನಲ್ಲಿ ಬಿಎಸ್ಎಫ್ ಯೋಧರು ಪಾಕಿಸ್ತಾನ ಪ್ರಸಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಪಂಜಾಬ್ ನ ಗುರುದಾಸ್ಪುರದಲ್ಲಿ ಪಾಕಿಸ್ತಾನ ಪ್ರಜೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಬಳಿಕ ಬಿಎಸ್ಎಫ್ ಯೋಧರು ಪಾಕಿಸ್ತಾನ ಪ್ರಜೆಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ಪಾಕಿಸ್ತಾನ ಪ್ರಜೆ ಬಳಿ ಇದ್ದ ಕರೆನ್ಸಿ ಮತ್ತು ಐಡಿ ಕಾರ್ಡ್ ಅನ್ನು ಜಪ್ತಿ ಮಾಡಲಾಗಿದೆ.