ಉಡುಪಿ : ಲಾರಿ ಹರಿದು ಪ್ರಥಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಸ್ಥಳದಲ್ಲಿ ಸಾವನ್ನಪ್ಪಿರುವ ಘೋರ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಹಾಲಾಡಿ ರಸ್ತೆಯ ಕಾಗೇರಿ ಪ್ರದೇಶದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಗೇರಿ ಪ್ರದೇಶ ಕೋಟೇಶ್ವರದ ವರದರಾಜ ಶೆಟ್ಟಿ ಸರ್ಕಾರಿ ಕಾಲೇಜು ವಿದ್ಯಾರ್ಥಿ ಧನುಷ್ (19) ಎಂದು ತಿಳಿದುಬಂದಿದೆ. ಕಾಲೇಜು ಮುಗಿಸಿ ಸ್ನೇಹಿತರ ಜೊತೆಗೆ ಧನುಶ್ ತೆರಳುತ್ತಿದ್ದ, ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ಈ ವೇಳೆ ಎದುರುನಿಂದ ಬರುತ್ತಿದ್ದ ಕಾರು ತಪ್ಪಿಸಲು ಹೋಗಿ ಲಾರಿ ಚಾಲಕರ ಧನುಷ್ಗೆ ಡಿಕ್ಕಿ ಹೊಡೆದಿದ್ದಾನೆ.ಈ ವೇಳೆ ಲಾರಿ ಹರಿದು ವಿದ್ಯಾರ್ಥಿ ಧನುಷ್ ಸ್ಥಳದಲ್ಲಿ ಸವಣಪ್ಪಿದ್ದಾನೆ ಘಟನೆ ಕೊಡಿತಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.