ಹೈದರಾಬಾದ್: ಹೃದಯಾಘಾತದಿಂದ ಭಾರತ ರಾಷ್ಟ್ರ ಸಮಿತಿ (BRS) ಜುಬಿಲಿ ಹಿಲ್ಸ್ನ ಶಾಸಕ ಮಗಂತಿ ಗೋಪಿನಾಥ್ ಅವರು ಇಂದು ಬೆಳಿಗ್ಗೆ 5.45 ಕ್ಕೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂರು ಬಾರಿ ಶಾಸಕರಾಗಿದ್ದ ಅವರನ್ನು ಹೃದಯಾಘಾತ ಉಂಟಾದ ಹಿನ್ನೆಲೆಯಲ್ಲಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ ನಿಧನರಾಗಿದ್ದಾರೆ.
ಮಗಂತಿ ಗೋಪಿನಾಥ್ ಪತ್ನಿ ಸುನಿತಾ ಮತ್ತು ಮೂವರು ಮಕ್ಕಳಾದ ಮಗಂತಿ ವಾತ್ಯಾಲ್ಯನಾದ್, ಅಕ್ಷರ ನಾಗ ಮತ್ತು ದಿಶಿರಾ ಅವರನ್ನು ಅಗಲಿದ್ದಾರೆ.