ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ತಮ್ಮನಿಸಿದಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ಕೊಲೆ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ನಾಳೆಗೆ ಮುಂದೂಡಿ ಆದೇಶ ಹೊರಡಿಸಿದರು.
ಇದಕ್ಕೂ ಮುನ್ನ ಕಳೆದ ವಿಚಾರಣೆಯ ವೇಳೆ ಪೊಲೀಸರ ಹಲವು ಲೋಪಗಳನ್ನು ಎತ್ತಿ ಹಿಡಿದು ದರ್ಶನ್ ಪರ ವಕೀಲರಾದಂತಹ ಸಿವಿ ನಾಗೇಶ್ ವಾದ ಮಂಡಿಸಿದ್ದರು. ಇದಕ್ಕೆ ಪ್ರಸನ್ನ ಕುಮಾರ್ ಅವರು ಎಲ್ಲ ಪ್ರಶ್ನೆಗಳಿಗು ನಮ್ಮಲ್ಲಿ ಉತ್ತರವಿದೆ ಎಂದು ಕೊನೆಯಲ್ಲಿ ತಿಳಿಸಿದ್ದರು. ಇಂದು ಅದಕ್ಕೆ ಪ್ರತಿಯಾಗಿ ಪೊಲೀಸ್ ಪರ ವಕೀಲ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ಮಾಧ್ಯಮಗಳಿಗೆ ಪೊಲೀಸರಿಂದ ಮಾಹಿತಿ ಸೋರಿಕೆಯಾಗಿಲ್ಲ. ಪ್ರತಿ ಬಾರಿ ಆರೋಪಿಗಳ ಪರ ವಕೀಲರು ಸಂದರ್ಶನ ಕೊಡುತ್ತಿದ್ದಾರೆ. ಸುದ್ದಿ ಬರಬಾರದೆನ್ನುವರು ಸಂದರ್ಶನ ಯಾಕೆ ಕೊಟ್ಟಿದ್ದು? ಮಾಧ್ಯಮಗಳ ವರದಿಯಿಂದ ಕೇಸ್ ಪೂರ್ವಾಗ್ರಹಕ್ಕೆ ಒಳಗಾಗುವುದು ಎಂಬುವುದು ಸರಿಯಲ್ಲ. ಮಾಧ್ಯಮಗಳಿಗೆ ಪೊಲೀಸರಿಂದ ಮಾಹಿತಿ ಸೋರಿಕೆಯಾಗಿಲ್ಲ ಎಂದು ವಾದಿಸಿದರು.
ಕೇಸ್ ಆರಂಭದ ದಿನದಿಂದಲೂ ಸಂದರ್ಶನ ನೀಡುತ್ತಿದ್ದಾರೆ ನಾನು ಈವರೆಗೂ ಮಾಧ್ಯಮಗಳಲ್ಲಿ ಕೆ ಸ್ ಬಗ್ಗೆ ಸಂದರ್ಶನ ನೀಡಿಲ್ಲ.ಈ ವೇಳೆ ರೇಣುಕಾ ಸ್ವಾಮಿ ಮೆಸೇಜ್ ಮಾಡಿರುವುದನ್ನು ಉಲ್ಲೇಖಿಸಿದ ಪ್ರಸನ್ನಕುಮಾರ್, ಗೌತಮ್ ಎಂಬ ಹೆಸರಿನಲ್ಲಿ ರೇಣುಕಾಶ್ ಸ್ವಾಮಿ ಚಾಟ್ ಇದೆ. A1 ಪವಿತ್ರ ಗೌಡ ರೇಣುಕಾ ಸ್ವಾಮಿ ನಡುವಿನ ಮೆಸೇಜ್ ಉಲ್ಲೇಖ ಮಾಡಿದ್ದು, ಡ್ರಾಪ್ ಮಿ ಯುವರ್ ನಂಬರ್ ಎಂಬ ಸಂದೇಶ ಕಳುಹಿಸುತ್ತಾರೆ.
ಫೆಬ್ರವರಿ ಯಿಂದಲೂ ಕೂಡ ರೇಣುಕಾ ಸ್ವಾಮಿ ಮೆಸೇಜ್ ಮಾಡುತ್ತಿದ್ದ.ರೇಣುಕಾ ಸ್ವಾಮಿ ಮೆಸೇಜ್ ಮಾಡುತ್ತಿರುವುದರ ಬಗ್ಗೆ ಪವಿತ್ರಗೌಡಗು ತಿಳಿದಿತ್ತು. ರೇಣುಕಾ ಸ್ವಾಮಿ ಪವಿತ್ರ ಗೌಡಗೆ ಮರವಾಂಗದ ಫೋಟೋ ಕಳುಹಿಸಿದ್ದ ಹೇಗಿದೆ ಅಂದಾಗ ಸೂಪರ್ ಎಂದಿದ್ದಾರೆ ಈ ರೀತಿ ಮೆಸೇಜ್ ಕಳುಹಿಸಿದರೆ ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ಕೇವಲ ಒಂದು ಬಟನ್ ಬ್ಲಾಕ್ ಒತ್ತಬೇಕು. ಬ್ಲಾಕ್ ಮಾಡಿ ರಿಪೋರ್ಟ್ ಮಾಡಿದರೆ ಕ್ರಮವಾಗುತ್ತದೆ. ಇಲ್ಲವೇ ಪೊಲೀಸರಿಗೆ ಕರೆ ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ. ಇವರು ಇದ್ಯಾವುದನ್ನು ಮಾಡದೆ ದರ್ಶನ್ ತೂಗುದೀಪ್ ಸೇನೆಗೆ ಸೂಚನೆ ನೀಡಿದ್ದಾರೆ ಪರ್ಯಾಯ ಸರ್ಕಾರ ನಡೆಸುವಂತೆ ಇವರು ವರ್ತಿಸಿದ್ದಾರೆ. ಹಾಗಾಗಿ ಷಡ್ಯಂತರ ರೂಪಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು.
ಆರೋಪಿ A3 ಪವನ್ ಪವಿತ್ರ ಗೌಡ ರೀತಿಯಲ್ಲಿ ಚಾಟ್ ಮಾಡಿದ್ದಾನೆ ನೀನು ಎಲ್ಲಿದ್ದೀಯಾ ಅಂತ ರೇಣುಕಾ ಸ್ವಾಮಿಗೆ ಪವನ್ ಮೆಸೇಜ್ ಕಳುಹಿಸಿದ್ದಾನೆ. ರೇಣುಕಾ ಸ್ವಾಮಿ ಅಪೋಲೋ ಫಾರ್ಮಸಿ ಫೋಟೋ ಕಳುಹಿಸುತ್ತಾನೆ. ನೀನು ಸುಳ್ಳು ಹೇಳುತ್ತಿದ್ದೀಯ ಎಂದು ಪವನ್ ಉತ್ತರಿಸುತ್ತಾನೆ.
ಪ್ರಪಂಚದಲ್ಲಿ ರೇಣುಕಾ ಸ್ವಾಮಿ ಇದ್ದಾನೆ ಎಂಬುದೇ ಗೊತ್ತಿರಲಿಲ್ಲ ಎಂದು ವಾದಿಸಿದ್ದಾರೆ. ಆದರೆ ರೇಣುಕಾ ಸ್ವಾಮಿ ಬಗ್ಗೆ ಇವರು ಮಾಹಿತಿ ಇದ್ದ ಬಗ್ಗೆ ದಾಖಲೆಗಳಿವೆ. ಜೂನ್ 6 ರಂದೇ A3, A1, A9 ನಡುವೆ ಕರೆಗಳು ವಿನಿಮಯವಾಗಿವೆ. A3, A4, A6, A7 ಹಾಗೂ A13 ಆರೋಪಿಗಳ ನಡುವೆ ಕರೆ ವಿನಿಮಯವಾಗುವೆ ಆರೋಪಿಗಳಿಗೆ ಪರಸ್ಪರ ಪರಿಚಯ ಇತ್ತು ಎಂಬುದಕ್ಕೆ ಈ ಕರೆಗಳ ವಿವರಗಳ ಸಾಕ್ಷಿಯಾಗಿವೆ.
ಎಲ್ಲಿದ್ದೀಯಾ ನೀನು ಅಂತ ಪವನ್ ರೇಣುಕಾ ಸ್ವಾಮಿಗೆ ಚಾಟ್ ಮಾಡಿದ್ದಾನೆ. ಈ ವಿಡಿಯೋ ರೇಣುಕಾ ಸ್ವಾಮಿ ಕೋರ್ಟ್ ಬಳಿ ಇದ್ದೀನಿ ಎಂದು ಹೇಳಿದ್ದಾನೆ. ಎಲ್ಲಿಯವರಿಗು ಇರ್ತಿಯ ಎಂಬ ಪ್ರಶ್ನೆಗೆ ಉತ್ತರಿಸಿದ್ದಾನೆ. ಇದು ದರ್ಶನ್ ಸೇನೆಗೆ ಪವನ್ ಸೂಚನೆ ಕೊಟ್ಟಿರುವುದಕ್ಕೆ ಸಾಕ್ಷಿಯಾಗಿದೆ.ಜೂನ್ 8ರಂದು ಆಟೋದಲ್ಲಿ ರೇಣುಕಾ ಸ್ವಾಮಿಯನ್ನು ಆರೋಪಿಗಳು ಹಿಂಬಾಲಿಸಿದ್ದರು.
ಸಿಸಿಟಿವಿ ದೃಶ್ಯಗಳು ಇಟಿಯೋಸ್ ಕಾರ್ ನಲ್ಲಿ ಇದ್ದದ್ದು ದೃಶ್ಯದಲ್ಲಿ ಕಂಡುಬದಿದೆ. ಹಾಗೂ ಕಾರಿನಲ್ಲಿ ಆರೋಪಿಗಳಿರುವುದು ಈ ದೃಶ್ಯಗಳಲ್ಲಿ ಸ್ಪಷ್ಟವಾಗಿದೆ. A6 ಪಕ್ಕ ರೇಣುಕಾ ಸ್ವಾಮಿ ಕುಳಿತಿರುವುದು ಕಂಡುಬರುತ್ತದೆ. ಚಿತ್ರದುರ್ಗದ ಹವಿ ಪಕ್ಕದಲ್ಲಿರುವ ದುರ್ಗಾ ಬಾರ್ ನಲ್ಲಿ ಸಿಸಿ ಟಿವಿ ದೃಶ್ಯವಿದೆ. ಮಧ್ಯಾಹ್ನ 1:32ಕ್ಕೆ ಇಟಿಯೋಸ್ ಕಾರ್ ಪಟ್ಟಣಗೆರೆ ಶಡ್ಗೆ ಬರುತ್ತದೆ. ಅಷ್ಟರಲ್ಲಿ A3 ಪವನ್ ಸೂಚನೆ ಮೇರೆಗೆ A5, A9 ಅಲ್ಲಿಗೆ ತೆರಳುತ್ತಾರೆ. A5, A9 ಅವರು A4ಗೆ ಸ್ಥಳದ ಲೊಕೇಶನ್ ಕಳುಹಿಸುತ್ತಾರೆ ಸ್ಥಳದಲ್ಲಿದ್ದವರು ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸುತ್ತಾರೆ.
ರೇಣುಕಾ ಸ್ವಾಮಿ ಬಿದ್ದಿರುವುದು ಮತ್ತು ಅಳುತ್ತಿರುವ ಫೋಟೋವನ್ನು ಕಳುಹಿಸಿದ್ದಾರೆ. A10ಗೆ ರೇಣುಕಾ ಸ್ವಾಮಿಯ ಫೋಟೋವನ್ನು ಕಳುಹಿಸಿದ್ದಾರೆ ಸಾಕ್ಷಿ ಒಬ್ಬರ ಮೊಬೈಲ್ ನಿಂದ ಫೋಟೋ ಕಳುಹಿಸಲಾಗಿದೆ.ಸ್ಥಳದಲ್ಲಿ ಆರೋಪಿಗಳು, ಸಾಕ್ಷಿ, ಮೃತನು ಇರುವುದಕ್ಕೂ ತಾಂತ್ರಿಕ ಸಾಕ್ಷಿ ಇದೆ. ಅಲ್ಲದೆ ಜೀಪ್ ನಲ್ಲಿ ಬಂದು ತೆರಳಿರುವುದಕ್ಕೂ ಸಿಸಿಟಿವಿ ದೃಶ್ಯ ಸಾಕ್ಷಿ ಇದೆ.ಪಕ್ಕದ ಕಟ್ಟಡದ ಸಿಸಿ ಟಿವಿ ದೃಶ್ಯವನ್ನು ಸಂಗ್ರಹಿಸಲಾಗಿದೆ.
ರೇಣುಕಾಸ್ವಾಮಿ ಲಾರಿಯ ಪಕ್ಕದಲ್ಲಿ ಬಿದ್ದಿರುವ ಫೋಟೋ ಇದೆ. ಲಾರಿಯ ಮಾಲೀಕ ಸಾಕ್ಷಿ 102ರ ಹೇಳಿಕೆಯನ್ನು ದಾಖಲಿಸಿದ್ದೇವೆ. ಸಾಲ ತೀರಿಸಲಾಗದ್ದಕ್ಕೆ ಅಲ್ಲಿಟ್ಟು ಕೊಂಡಿದ್ದಾರೆ ಎಂಬ ಹೇಳಿಕೆ ಇದೆ. ಷಡ್ ನಲ್ಲಿದ್ದ ಸಾಕ್ಷಿಗಳು ಖಾಸಗಿ ಸೆಕ್ಯೂರಿಟಿ ಸಂಸ್ಥೆಯ ಸಿಬ್ಬಂದಿಗಳಾಗಿದ್ದಾರೆ. ಶೆಡ್ ನಲ್ಲಿ ಕಾವಲಾಗಿರಲು ಶಡ್ ಮಾಲೀಕರು ಅವರನ್ನು ಇಟ್ಟುಕೊಂಡಿದ್ದರು.
ಸಾಕ್ಷಿಗಳ ಹೇಳಿಕೆ ದಾಖಲಿಸಲು ತಡವಾಗಿದ್ದ ಬಗ್ಗೆ ವಾದಿಸಿದ ಪ್ರಸನ್ನ ಕುಮಾರ್ ಸಾಕ್ಷಿಯ ಹೇಳಿಕೆಯಲ್ಲಿ ಘಟನೆಯ ವಿವರವಿದೆ. ಪವನ್ ಹಾಗೂ ಜೊತೆಗೆ ಹುಡುಗರು ಬರುತ್ತಾರೆ. ಅವರನ್ನು ಒಳಗೆ ಬಿಡುವಂತೆ ಎ10 ಆರೋಪಿ ವಿನಯ್ ಸೂಚಿಸಿದ್ದಾನೆ. A9 ಧನರಾಜ A5 ನಂದೀಶ್ A3ಪವನ್ ಕಟ್ಟಿಗೆಯಲ್ಲಿ ಹೊಡೆದಿದ್ದಾರೆ. A5 ನಂದೀಶ್ ರೇಣುಕಾ ಸ್ವಾಮಿಯನ್ನು ಕುಕ್ಕುತ್ತಿದ್ದ. ಧನರಾಜ ಬಂದು ಶಾಕ್ ಕೊಡುತ್ತಿದ್ದ ಬಗ್ಗೆ ಸಾಕ್ಷಿ ಹೇಳಿದ್ದಾನೆ.
ಈ ವೇಳೆ ಎಸ್ ಪಿ ಪಿ ಪ್ರಸನ್ನ ಕುಮಾರ್ ಪ್ರತ್ಯಕ್ಷ ಸಾಕ್ಷಿ ಓದಿದರು. ನಾನು ಹೋಗಿ ರೇಣುಕಾ ಸ್ವಾಮಿಯ ಮಲಗಿದ್ದ ಫೋಟೋ ಕಳುಹಿಸುತ್ತೇನೆ. ಎದೆಗೆ ಒರೆಯುತ್ತಿದ್ದರು ಎಂಬ ಹೇಳಿಕೆ ಇದೆ. ಇದಕ್ಕೆ ಪೂರಕ ಗಾಯಗಳಾಗಿವೆ ಮೆಸೇಜ್ ಓದುವಂತೆ ಹೇಳುತ್ತಾ ದರ್ಶನ್ ರೇಣುಕಾ ಸ್ವಾಮಿ ಮರ್ಮಾಂಗಕ್ಕೆ ಹೊದಿಯುತ್ತಾರೆ. ಇದಕ್ಕೆ ಪೂರಕವಾದ ಗಾಯದ ಗುರುತು ದೇಹದಲ್ಲಿ ಪತ್ತೆಯಾಗಿದೆ.
ಎದೆಗೂಡಿನ ಮೂಳೆ ಮುರಿದಿರುವ ಬಗ್ಗೆ ಪೋಸ್ಟ್ ಮಾರ್ಟಂ ವರದಿ ಇದೆ. ರೇಣುಕಾಸ್ವಾಮಿ ದೇಹದಲ್ಲಿ ಆಗಿರುವ 17 ಫ್ರಾಕ್ಚರ್ ಗಾಯಗಳ ಬಗ್ಗೆ ವರದಿ ಇದೆ. ಈ ಎಲ್ಲಾ ಗಾಯಗಳು ಸಾವಿಗೆ ಮೊದಲೇ ಆಗಿರುವಂತದ್ದೆಂದು ಪೋಸ್ಟ್ ಮಾರ್ಟಂ ವಿಳಂಬದಿಂದ ತನಿಖೆಗೆ ತೊಂದರೆಯಾಗಿಲ್ಲ. ಪೋಸ್ಟ್ ಮಾರ್ಟಂ ವಿಡಿಯೋ ಚಿತ್ರೀಕರಿಸಲಾಗಿದೆ ಲಿವರ್ ನ ಪೀಸ್ ಒಂದನ್ನು ಕಾಯ್ದಿರಿಸಲಾಗಿದೆ ಎಂದು ವಾದಿಸಿದರು.
ರೇಣುಕಾಸ್ವಾಮಿಯ ದೇಹದಲ್ಲಿದ್ದ 13 ಗಾಯಗಳಿಂದ ರಕ್ತ ಹೊರ ಬಂದಿದೆ ಎಂದು ವರದಿಯಲ್ಲಿದೆ. 13 ಗಾಯಗಳಿಂದ ರಕ್ತ ಬಂದಿದೆ ಎಂಬ ವೈದ್ಯಕೀಯ ವರದಿ ಇದೆ. ಹೀಗಾಗಿ ಎಲ್ಲೆಡೆ ರಕ್ತ ಚಲ್ಲಾಡಿಲ್ಲವೆಂಬ ಆರೋಪಿ ವಾದದಲ್ಲಿ ಹುರುಳಿಲ್ಲ. ರೇಣುಕಾ ಸ್ವಾಮಿಯ ಎದೆಯ ಮೇಲೆ ದರ್ಶನ್ ನಿಂತಿದ್ದ. ಇದರಿಂದಲೇ ರೇಣುಕಾ ಸ್ವಾಮಿಯ ದೇಹದಲ್ಲಿ ಮೂಳೆ ಮುರಿತವಾಗಿದೆ.
ಮರ್ಮಾಂಗದ ಮೇಲಿನ ಗಾಯಕ್ಕೆ ದರ್ಶನ ಹೊಡೆದಕ್ಕೂ ಸಂಬಂಧವಿದೆ. ಪ್ಯಾಂಟ್ ಬಿಚ್ಚಿ ಮರ್ಮಾಂಗದ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾನೆ. ದರ್ಶನ್ ಶೂನಲ್ಲೂ ಕೂಡ ರಕ್ತದ ಕಲೆಗಳು ಕಂಡುಬಂದಿವೆ. ಸಾವಿನ ಸಮಯದಲ್ಲಿಯೂ ಕೂಡ ಊಟದ ಕುರಿತು ವರದಿ ಇದೆ. ಊಟ ಮಾಡಿದ 2 ಗಂಟೆಯಲ್ಲಿ ಸಾವು ಸಂಭವಿಸಿದೆ. ಹೊಟ್ಟೆಯಲ್ಲಿರುವ ಆಹಾರದಲ್ಲಿನ ಅಂಶಗಳನ್ನು ಗಮನಿಸಿ ವರದಿ ನೀಡಿದ್ದಾರೆ. ಶ್ವಾಸಕೋಶದಲ್ಲಿ ಗಾಯಗಳಾಗಿದ್ದು ಇದು ದರ್ಶನ್ ರಕ್ತ ಚರಿತ್ರೆ ತೋರಿಸುತ್ತದೆ ಎಂದು ವಾದಿಸಿದರು. ಈ ವೇಳೆ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿದರು