ಮುಂಬೈ : 30 ಪ್ರಯಾಣಿಕರನ್ನ ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ ಘಟನೆ ಬುಧವಾರ ನಡೆದಿದ್ದು, ದೋಣಿ ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ಹೋಗುತ್ತಿತ್ತು.
ಅದ್ರಂತೆ, ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಬುಧವಾರ ‘ನೀಲಕಮಲ್’ ಹೆಸರಿನ ದೋಣಿ ಮಗುಚಿ ಬಿದ್ದಿದೆ. ನೌಕಾಪಡೆ, ಕೋಸ್ಟ್ ಗಾರ್ಡ್, ಯೆಲ್ಲೋಗೇಟ್ ಪೊಲೀಸ್ ಠಾಣೆ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನ ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅದರಲ್ಲಿ 30 ರಿಂದ 35 ಪ್ರಯಾಣಿಕರಿದ್ದರು. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.
ದೋಣಿ ಗೇಟ್ ವೇಯಿಂದ ಎಲಿಫೆಂಟಾ ದ್ವೀಪಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಲೈಫ್ ಜಾಕೆಟ್ ಧರಿಸಿದ್ದ ಪ್ರಯಾಣಿಕರನ್ನು ರಕ್ಷಿಸಿ ಮತ್ತೊಂದು ದೋಣಿಗೆ ಸ್ಥಳಾಂತರಿಸಲಾಗಿದ್ದು, ಹಡಗು ನಿಧಾನವಾಗಿ ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಸ್ಥಳದ ದೃಶ್ಯಗಳು ತೋರಿಸಿವೆ.
‘ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿ’ಯಿಂದ ಆಸ್ತಿ ಮರುಪಡೆಯುವಲ್ಲಿ ‘ED’ ಪ್ರಯತ್ನ ಶ್ಲಾಘಿಸಿದ ವಿತ್ತ ಸಚಿವೆ
BREAKING : ಬಿಎಸ್ ಯಡಿಯೂರಪ್ಪ ವಿರುದ್ಧದ ‘ಪೋಕ್ಸೋ’ ಕೇಸ್ : ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್
‘ಪ್ರಧಾನಿ ಮೋದಿ’ಗೆ ‘ಅಂಬೇಡ್ಕರ್’ ಮೇಲೆ ಗೌರವಿದ್ರೆ, ರಾತ್ರಿಯೊಳಗೆ ‘ಅಮಿತ್ ಶಾ’ ವಜಾಗೊಳಿಸಲಿ ; ಮಲ್ಲಿಕಾರ್ಜುನ ಖರ್ಗೆ