ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಕುರಿತು ಗಂಭೀರ ಚರ್ಚೆ ನಡೆಯಿತು. ಈ ವೇಳೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಕೂಡ ರೋಷಾವೇಷ ಪ್ರದರ್ಶಿಸಿದರು. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಎಲ್ಲಾ ಶಾಸಕರ ಜೀವನವನ್ನು ಹಾಳು ಮಾಡುತ್ತಾರೆ. ಈಗ ನನ್ನ ಜೀವನ ಹಾಳು ಮಾಡಿದ್ದಾರೆ. ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕರಾದರು. ಈ ಹನಿಟ್ರ್ಯಾಪ್ ಟೀಂ ಡಿಸಿಎಂ ಡಿಕೆ ಶಿವಕುಮಾರ್ ಅವರದ್ದು ಎಂದು ಶಾಸಕ ಮುನಿರತ್ನ ಗಂಭೀರವಾಗಿ ಆರೋಪಿಸಿದರು.
ಹನಿಟ್ರ್ಯಾಪ್ ವಿಚಾರವಾಗಿ ವಿಧಾನಸಭೆಯಲ್ಲಿ ಇಂದು ಗಂಭೀರವಾದ ಚರ್ಚೆ ನಡೆಯಿತು. ಅತ್ಯಾಚಾರ ಮಾಡಿದ್ದೀನಿ ಅಂತ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಮನೇಲಿ 15 ವರ್ಷದ ನನ್ನ ಮೊಮ್ಮಕ್ಕಳು ಇದ್ದಾರೆ. ಮಾಜಿ ಸಚಿವ ಎಚ್ ಡಿ ರೇವಣ್ಣ ಮನೆ ಹಾಳು ಮಾಡಿದರು. ಶಾಸಕ ರಮೇಶ ಜಾರಕಿಹೊಳಿ ಮನೆ ಹಾಳು ಮಾಡಿದರು. ಈಗ ನನ್ನ ಮನೆ ಹಾಳು ಮಾಡಿದ್ದಾರೆ. ಮುಂದೆ ಬೇರೆ ಶಾಸಕರ ಮನೆಯನ್ನು ಹಾಳುಮಾಡಬಾರದು ಎಂದು ಆಗ್ರಹಿಸಿದರು.
ರಮೇಶ್ ಜಾರಕಿಹೊಳಿ, HD ರೇವಣ್ಣ ಏನು ಪಾಪ ಮಾಡಿದ್ದಾರೆ? ರೇವಣ್ಣರನ್ನು ಕೊರಳುಪಟ್ಟಿ ಹಿಡಿದು ಎಳೆದುಕೊಂಡು ಬಂದಿದ್ದಾರೆ. ಒಂದು ಹನಿ ಟ್ರ್ಯಾಕ್ ಟೀಮ್ ಇದೆಯಲ್ಲ ಇದು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ಅವರದ್ದು ಮಧ್ಯರಾತ್ರಿ ಈ ಒಂದು ಹನಿಟ್ರ್ಯಾಪ್ ನೊಂದಿಗೆ ಮೀಟಿಂಗ್ ಮಾಡುತ್ತಾರೆ. ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಈ ರೀತಿ ಮಾಡುತ್ತಿದ್ದಾರೆ.ಈ ಹಿಂದೆ ನನಗೆ ಮತ್ತು ರಮೇಶ್ ಜಾರಕಿಹೊಳಿಗೆ ಮಾಡಿದರು. ಈಗ ಸಚಿವ ಕೆ ಎನ್ ರಾಜಣ್ಣಗೆ ಹನಿಟ್ರ್ಯಾಪ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ.
ಹೋಂ ಮಿನಿಸ್ಟರ್ ಈಗ ತನಿಖೆಗೆ ಆದೇಶಿಸುತ್ತೇನೆ ಎಂದಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಒಂದು ಕಿವಿಮಾತು ಹೇಳುತ್ತೇನೆ. ನಿಮಗೂ ಕುಟುಂಬ ಇದೆ ಯಾರಾದರೂ ಕಣ್ಣೀರು ಹಾಕುತ್ತಾರೆ. ಮುಖ್ಯಮಂತ್ರಿ ಆಗೋಕೆ ಹೊರಟಿದ್ದೀರಿ ನಿಮಗೆ ಶೋಭೇತರಲ್ಲ. ಇನ್ಮುಂದೆ ಬುದ್ಧಿ ಕಲಿಯಿರಿ ಹನಿ ಟ್ರ್ಯಾಪ್ ಮಾಡೋದು ಬಿಡಿ. ಹನಿ ಟ್ರ್ಯಾಪ್ ಟೀಮ್ ಯಾರು ಅಂತ ಗೊತ್ತಿದೆ. ನಾನು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದಾಗಲೇ ಪ್ರಯತ್ನಪಟ್ಟಿದ್ದೀರಿ ನಾನು ಡಿಕೆ ಶಿವಕುಮಾರ್ ಬಹಳ ಹತ್ತಿರದಲ್ಲೇ ಜೀವನ ಮಾಡಿದ್ದೇವೆ.
ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಶಾಸಕ ಮುನಿರತ್ನ ತೀವ್ರ ವಾಗ್ದಾಳಿ ನಡೆಸಿದರು.