ಮೈಸೂರು : ಮೈಸೂರಿನ ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಸತೀಶ್ ಮೊಬೈಲ್ ನಲ್ಲಿ ಅಂದು ಆತ ಸ್ಟೇಟಸ್ ಹಾಕಿಕೊಂಡಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.
ಹೌದು ಆರೋಪಿ ಸತೀಶ್ ಹಾಕಿಕೊಂಡಿದ್ದ ಸ್ಟೇಟಸ್ ರಿಲೀಸ್ ಆಗಿದ್ದು, ಸತೀಶ್ ಅಂಗಡಿಯ ಹುಡುಗರಿಂದಲೇ ಈ ಒಂದು ವಿಡಿಯೋ ಸ್ಟೇಟಸ್ ಲೀಕ್ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಸತೀಶ್ ಹಾಕಿಕೊಂಡಿದ್ದ ಆಕ್ಷೇಪಾರ್ಹ ಫೋಟೋ ಇದೀಗ ರಿವಿಲ್ ಆಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಕೇಜ್ರಿವಾಲ್ ಫೋಟೋ ಸ್ಟೇಟಸ್ ಹಾಕಿಕೊಂಡಿದ್ದು, ಫೋಟೋ ತುಂಬಿಲ್ಲ ಅರೇಬಿಕ್ ಅಕ್ಷರಗಳಲ್ಲಿ ಬರೆಯಲಾಗಿತ್ತು.
ಅಲ್ಲದೇ ಸ್ಟೇಟಸ್ ಓಪನ್ ಮಾಡಿ ವಿಡಿಯೋ ಮಾಡಲಾಗಿತ್ತು. ಆರೋಪಿ ಮೊಬೈಲ್ ನಿಂದ ವಿಡಿಯೋ ಮಾಡಲಾಗಿತ್ತು. ಈ ಒಂದು ವಾಟ್ಸಪ್ ಸ್ಟೇಟಸ್ ಆರೋಪಿ ಸತೀಶ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕರೇ ಇದನ್ನು ಸತೀಶ್ ಮೊಬೈಲ್ ಪಡೆದುಕೊಂಡು ಆತ ಸ್ಟೇಟಸ್ ಹಾಕಿಕೊಂಡಿದ್ದನ್ನು ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ಸತೀಶ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.