ಬೆಳಗಾವಿ : ಕರ್ನಾಟಕ ಮತ್ತು ಗೋವಾ ಗಡಿ ಭಾಗದಲ್ಲಿ 400 ಕೋಟಿ ರಾಬರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸ್ಪೋಟಕ ಆಡಿಯೋ ಲಭ್ಯವಾಗಿದೆ. ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಕೇಸ್ ಗೆ ಸಂಬಂಧಪಟ್ಟಂತೆ ಆರೋಪಿಗಳು ಇಬ್ಬರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಆರೋಪಿಗಳಾದ ವಿರಾಟ್ ಮತ್ತು ಜಯೆಶ್ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್ ಆಗಿದೆ. ಇಬ್ಬರು ಮಾತನಾಡಿದ್ದಾರೆ ಆಶ್ರಮ ಒಂದರಲ್ಲಿ ಎರಡು ಸಾವಿರ ಹಣ ಬದಲಾವಣೆ ಕುರಿತು ಚರ್ಚೆ ಮಾಡಿದ್ದಾರೆ. ಅಹಮದಾಬಾದ್ ನ ಆಶ್ರಮ ಒಂದರಲ್ಲಿ ಡೀಲ್ ಕುರಿತು ಮಾತು ಆಡಿದ್ದಾರೆ. ಉದ್ಯಮಿ ಕಿಶೋರ್ ಬಳಿ ಹಣ ಇರುವ ಕುರಿತು ಮಾತುಕತೆ ನಡೆದಿರುವ ಆಡಿಯೋ ವೈರಲ್ ಆಗಿದೆ.
ಉದ್ಯಮಿ ಕಿಶೋರ್ ಮತ್ತು ಆರೋಪಿ ಜಯೇಶ್ ಆಡಿಯೋ ವೈರಲಾಗಿದೆ ಹಣ ಸಾಗಣೆ ಮತ್ತು ಹಣ ದರೋಡೆಯಾಗಿರುವ ಕುರಿತು ಚರ್ಚಿಸಿದ್ದು ಹಣ ಸಾಗಾಟದ ಜವಾಬ್ದಾರಿಯನ್ನು ಆರೋಪಿ ವಿರಾಟ್ ಹೊತ್ತುಕೊಂಡಿದ್ದ. ವಿರಾಟ್ ಹುಡುಗರ ಮೂಲಕ ಹಣ ಸಾಗಿಸಲು ಹೇಳಲಾಗಿತ್ತು ಈಗ ವಿರಾಟ್ ಗ್ಯಾಂಗಿನ ಹುಡುಗರು ನಾಪತ್ತೆಯಾಗಿದ್ದಾರೆ.
ಗುಜರಾತ್ ಮೂಲದ ಓರ್ವ ರಾಜಕಾರಣಿ ಸಹ ಆಗಿದ್ದವು ಈ ಎಲ್ಲ ವಿಚಾರ ರಾಜಕಾರಣಿಗೆ ಗೊತ್ತಿದೆ ಎಂದು ಚರ್ಚೆ ಮಾಡಿದ್ದಾರೆ. ಕರ್ನಾಟಕ ಪೊಲೀಸರು ಕೂಡ ಇದರಲ್ಲಿ ಭಾಗಿಯಾಗಿರುವ ಕುರಿತು ಪ್ರಸ್ತಾಪಿಸಿದ್ದಾರೆ ಕರ್ನಾಟಕ ಪೊಲೀಸರು ಇದರಲ್ಲಿ ಇದ್ದರೂ ಹಣ ಎಲ್ಲೋಯ್ತು ಗೊತ್ತಾಗುತ್ತಿಲ್ಲ ಎಂದು ಸಂಭಾಷಣೆ ಮಾಡಿದ್ದಾರೆ.








