ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮಾಜಿ ಆಯುಕ್ತ ಡಿ ಬಿ ನಟೇಶ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮುಡಾ ಹಗರಣದ ವಿಚಾರವಾಗಿ ಕಳೆದ 2024 ಅಕ್ಟೋಬರ್ 28 29 ರಂದು ಇಡಿ ಕಾನೂನುಬಾಹಿರವಾಗಿ ನನ್ನ ಹೇಳಿಕೆ ಪಡೆದಿದೆ ಎಂದು ಇಡಿ ಸಮನ್ಸ್ ರದ್ದುಗೊಳಿಸಿ ಎಂದು ನಟೇಶ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಇಡಿ ಸಮನ್ಸ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕಳೆದ ಅಕ್ಟೊಬರ್ ನಲ್ಲಿ ಇಡಿ ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಆಯುಕ್ತ ನಟೇಶ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಈ ಒಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಚಂದನ್ ಗೌಡ ಅವರಿದ್ದ ಪೀಠ ಇಡಿ ಸಮನ್ಸ್ ರದ್ದುಗೊಳಿಸಿ ಈ ಒಂದು ಆದೇಶ ಹೊರಡಿಸಿದ್ದಾರೆ.
2024 ರಲ್ಲಿ ಅಕ್ಟೋಬರ್ 28 29ರಂದು ಇಡಿ ತಮ್ಮ ಹೇಳಿಕೆ ಪಡೆದಿದೆ ತಮ್ಮ ಹೇಳಿಕೆ ಪಡೆದಿರುವುದು ಕಾನೂನು ಬಾಹಿರ ಹೀಗಾಗಿ PMLA ಕಾಯ್ದೆಯ ಅಡಿ ಶೋಧನೆ ವರದಿಗೆ ಮನವಿ ಮಾಡಿದರು. ಇಡಿ ಸಮಾಜ ರದ್ದು ಪಡಿಸಲು ಮನವಿ ಮಾಡಿದ್ದ ನಟೇಶ್ ಇದೀಗ ಇಡಿ ಸಮನ್ಸ್ ರದ್ದುಪಡಿಸುವ ಮೂಲಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.